ಬೆಂಗಳೂರು: ಇಂದು ಕರ್ನಾಟಕದಲ್ಲಿ 600 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 1,283 ಜನ ಡಿಸ್ಚಾರ್ಜ್‌ ಆಗಿದ್ದಾರೆ. ಒಟ್ಟು 3 ಮಂದಿ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,22,538ಕ್ಕೆ ಏರಿಕೆ ಆಗಿದೆ. ಈ ಪೈಕಿ 9,00,202 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 10,207 ಸಕ್ರಿಯ ಪ್ರಕರಣಗಳಿವೆ.ಒಟ್ಟು ಇಲ್ಲಿಯವರೆಗೆ 12,110 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 196 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಂದು 3,651 ಆಂಟಿಜನ್‌ ಟೆಸ್ಟ್‌, 95,515 ಆರ್‌ಟಿ ಪಿಸಿಆರ್‌ ಸೇರಿದಂತೆ ಒಟ್ಟು 99,166 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 298, ಚಿತ್ರದುರ್ಗ 37, ಹಾಸನ 27, ಮೈಸೂರಿನಲ್ಲಿ 20 ಮಂದಿಗೆ ಸೋಂಕು ಬಂದಿದೆ.ಐಸಿಯುನಲ್ಲಿಒಟ್ಟು 196 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 81, ಕಲಬುರಗಿ 13, ಹಾಸನ 10, ಗದಗದಲ್ಲಿ 10 ಮಂದಿ ಐಸಿಯುನಲ್ಲಿದ್ದಾರೆ.Sign in to your account
Username or Email Address


Password

 Remember Me


