ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಇಂದು ಬೈಕಿನಲ್ಲಿ ಕುಳಿತುಕೊಂಡು ಬೆಂಗಳೂರಿನಲ್ಲಿ ಸಂಚರಿಸಿದ್ದಾರೆ.ಬಿಜೆಪಿ ಪಕ್ಷದ ಕೆಲಸದ ಸಂಬಂಧ ಸಚಿವರು ಬೈಕ್‌ ಏರಿ ಹೆಲ್ಮೆಟ್‌ ಧರಿಸಿ ರಾಜಾಜಿನಗರ ಕ್ಷೇತ್ರದಲ್ಲಿ ಜನರ ಮನೆಗಳಿಗೆ ಭೇಟಿ ನೀಡಿದ್ದಾರೆ. ಈ ಸಂಬಂಧ ಫೇಸ್‌ಬುಕ್‌ನಲ್ಲಿ ಫೋಟೋ ಪ್ರಕಟಿಸಿ ಬಹಳ ದಿನಗಳ ನಂತರ ದ್ವಿಚಕ್ರವಾಹನದಲ್ಲಿ ಸಂಚರಿಸಿದೆ ಎಂದು ಬರೆದುಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ?
ಇಂದು ಬೆಳಗ್ಗೆ ನಮ್ಮ ರಾಜಾಜಿನಗರ ಕ್ಷೇತ್ರದಲ್ಲಿ ಪಕ್ಷದ ಪ್ರಮುಖರೊಂದಿಗೆ ದ್ವಿಚಕ್ರ ವಾಹನಗಳಲ್ಲಿ ಓಡಾಡಿ ವಾರ್ಡ್‌ಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಮತ್ತು ಕೆಲವು ನಾಗರೀಕರ ಮನೆಗಳಿಗೆ ಭೇಟಿ ಕೊಟ್ಟೆ.ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ಅನೌಪಚಾರಿಕ ಭೇಟಿಯಲ್ಲಿ ಅನೇಕರೊಂದಿಗೆ ಮಾತನಾಡುವ ಹಾಗೂ ವಿವಿಧ ವಿಷಯಗಳ ಕುರಿತು ಅಭಿಪ್ರಾಯ ಪಡೆಯುವ ಅವಕಾಶ ದೊರಕಿತು. ಬಹಳ ದಿನಗಳ ನಂತರ ದ್ವಿಚಕ್ರವಾಹನದಲ್ಲಿ ಓಡಾಡಿದ ಸುಖ ನನ್ನದಾಗಿತ್ತು. Sign in to your account
Username or Email Address


Password

 Remember Me


