ಮಂಗಳೂರು: ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ಭಾನುವಾರ ನಡೆದಿದೆ.ನೆಲ್ಯಾಡಿ ನಿವಾಸಿ ವಿ.ಜೆ.ಜೋಸೆಫ್ ಪುತ್ರಿ 22 ವರ್ಷದ ನವ್ಯಾ ಜೋಸೆಫ್ ಆತ್ಮಹತ್ಯೆಗೆ ಶರಣಾದ ಯುವತಿ. ಭಾನುವಾರ ರಾತ್ರಿ ಊಟದ ಬಳಿಕ ಸುಮಾರು 10.30ಕ್ಕೆ ನವ್ಯಾ ತನ್ನ ರೂಮ್ ಸೇರಿಕೊಂಡಿದ್ದಳು. ಇಂದು ಬೆಳಗ್ಗೆ ಬಾಗಿಲು ತೆರೆಯದ ಹಿನ್ನೆಲೆ ಕುಟುಂಬಸ್ಥರು ಹೊರಗೆ ಬರುವಂತೆ ಕರೆದಿದ್ದಾರೆ. ಕೋಣೆಯೊಳಗಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ಒಡೆದು ನೋಡಿದಾಗ ನವ್ಯಾ ಆತ್ಮಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.ಬಿಬಿಎ ಪದವಿ ಪಡೆದ ಬಳಿಕ ನವ್ಯಾ ಮನೆಯಲ್ಲಿಯೇ ಇದ್ದಳು. ನವ್ಯಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


