ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿ ಬಿಡುಗಡೆಗೊಂಡ ನಟಿ ಸಂಜನಾ ಗಲ್ರಾನಿ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.ಜೈಲಿನಿಂದ ಬಿಡುಗಡೆಯಾದ 1 ತಿಂಗಳ ಬಳಿಕ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳಿಗೆ ಪ್ರೀತಿಯ ಸಂದೇಶವನ್ನು ನೀಡಿದ್ದಾರೆ. ಅಲ್ಲದೆ ಕಷ್ಟದ ಸಮಯದಲ್ಲಿ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.ಸಂಜನಾ ಬರೆದುಕೊಂಡಿದ್ದೇನು..?
ನನ್ನ ಇನ್ ಬಾಕ್ಸ್‍ಗೆ ಸಂದೇಶ ಕಳುಹಿಸಿದ್ದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದ. ಪ್ರತಿಯೊಬ್ಬರ ಮೇಸೆಜ್ ಕೂಡ ಓದಿದ್ದೇನೆ. ನಿಮ್ಮ ಅಮೂಲ್ಯವಾದ ಕಾಳಜಿ ಮತ್ತು ಪ್ರೀತಿ ನನ್ನನ್ನು ಆಶೀರ್ವದಿಸಿದೆ ಎಂದು ಭಾವಿಸುತ್ತೇನೆ. ನಾನು ಆರೋಗ್ಯವಾಗಿದ್ದೇನೆ. ನಿಮ್ಮಲ್ಲರ ಪ್ರೀತಿಗೆ ನನ್ನ ಕುಟುಂಬ, ಸ್ನೇಹಿತರು ನಾನು ಎಷ್ಟು ಧನ್ಯವಾದ ಹೇಳಿದರು ಸಾಲದು ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.ಅಲ್ಲದೇ ಸಂಜನಾ ನಾನು ಇದೀಗ ಆರೋಗ್ಯಕರವಾಗಿದ್ದೇನೆ. ಶೀಘ್ರವೇ ಮೊದಲಿನಂತೆ ಸಾಮಾಜಿಕ ಜಾಲತಾಣಕ್ಕೆ ಮರುಳುತ್ತೇನೆ ಎಂದು ಕೂಡ ತನ್ನ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.2020ರ ಸೆಪ್ಟೆಂಬರ್ 8ರಂದು ಸ್ಯಾಂಡಲ್‍ವುಡ್ ಡ್ರಗ್ ಕೇಸ್‍ನಲ್ಲಿ ಭಾಗಿಯಾಗಿದ್ದ ಗಂಡ-ಹೆಂಡತಿ ಸಿನಿಮಾದ ನಟಿ ಸಂಜನಾ ಗಲ್ರಾನಿಯನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ ಬಂಧಿಸಲಾಯಿತು. ಸುಮಾರು 90 ದಿನಗಳ ನಂತರ 12 ಡಿಸೆಂಬರ್ 2020 ರಂದು ಅನಾರೋಗ್ಯದ ಕಾರಣದಿಂದ ವೈದ್ಯಕೀಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಲಾಯಿತು. ಇದೀಗ ತಮ್ಮ ಇನ್ಸ್ಟಾಗ್ರಾಮ್‍ನಲ್ಲಿ ನೆಚ್ಚಿನ ಅಭಿಮಾನಿಗಳಿಗೆ ಆರೋಗ್ಯವಾಗಿದ್ದೇನೆ ಶೀಘ್ರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗುವುದಾಗಿ ತಿಳಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


