ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ನಟ ಯಶ್ ಮತ್ತು ಡಿಸಿಎಂ ಅಶ್ವತ್ ನಾರಾಯಣ್ ತಿರುನಲ್ಲೂರಿನಲ್ಲಿರುವ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.ಸದ್ಯ ಕೆಜಿಎಫ್ ಭಾಗ ಒಂದರ ಯಶಸ್ಸಿನ ನಂತರ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿರುವ ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್‍ರ ಕೆಜಿಎಫ್ – 2 ಚಿತ್ರದ ಚಿತ್ರೀಕರಣ ಅಕ್ಟೋಬರ್ ತಿಂಗಳಿನಿಂದ ಪ್ರಾರಂಭವಾಗಿದೆ. ಕೆಜಿಎಫ್-2 ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿರುವ ಯಶ್ ಬಿಡುವು ಮಾಡಿಕೊಂಡು ಇಂದು ತಮಿಳುನಾಡಿನ ಕಾರೈಕಲ್ ಜಿಲ್ಲೆಯ ತಿರುನಲ್ಲೂರುನಲ್ಲಿರುವ ಶನೇಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಈ ವೇಳೆ ಬಿಜೆಪಿ ಪಕ್ಷದ ಡಿಸಿಎಂ ಅಶ್ವಥ್ ನಾರಾಯಣ್ ಕೂಡ ತಿರುನಲ್ಲೂರುನಲ್ಲಿನ ಶನೇಶ್ವರನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ನಡುವೆ ಯಶ್ ಕೂಡ ಅಲ್ಲಿಯೇ ಇರುವುದನ್ನು ತಿಳಿದು ಇಬ್ಬರೂ ಜತೆಗೆ ದೇವರ ದರ್ಶನ ಪಡೆದಿದ್ದಾರೆ.ಸದ್ಯ ರಾಕಿಂಗ್ ಸ್ಟಾರ್ ಯಶ್‍ನ ಕೆಜಿಎಫ್- 2 ಭಾಗದ ಚಿತ್ರೀಕರಣ ನಡೆಯುತ್ತಿದೆ. ಚಿತ್ರಕ್ಕೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನಿರ್ಮಾಪಕ ವಿಜಯ್ ಕಿರಂಗದೂರ್ ಬಂಡವಾಳ ಹೂಡಿದ್ದಾರೆ. ಸದ್ಯ ಪೋಸ್ಟರ್ ಮೂಲಕವೇ ಕುತೂಹಲ ಕೆರಳಿಸಿರುವ ಕೆಜೆಎಫ್-2 ಬಗ್ಗೆ ಜನರಿಗೆ ಹೆಚ್ಚು ಕ್ಯೂರಿಯಸ್ ಹುಟ್ಟಿಸಿರುವ ಚಿತ್ರತಂಡ, ಸಿನಿಮಾ ಬಿಡುಗಡೆಯ ನಂತರ ರಾಕಿಂಗ್ ಸ್ಟಾರ್ ಯಶ್ ಮತ್ತೆ ಪ್ರೇಕ್ಷಕರನ್ನು ಹೇಗೆ ಮೋಡಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.Sign in to your account
Username or Email Address


Password

 Remember Me


