ಹಾವೇರಿ: ಬೊಲೆರೋ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕದಮನಹಳ್ಳಿ ಗ್ರಾಮದ ಬಳಿ ನಡೆದಿದೆ.ಮಂಜು ಸೋಮನಕಟ್ಟಿ(37) ಮತ್ತು ಬಸವರಾಜ ವಾಲ್ಮೀಕಿ(40) ಮೃತ ದುರ್ದೈವಿಗಳು. ಇವರು ಹಾವೇರಿ ತಾಲೂಕಿನ ಗಣಜೂರು ಗ್ರಾಮದ ನಿವಾಸಿಗಳು.ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಪ್ರಯಾಣಿಸ್ತಿದ್ದ ಸರ್ಕಾರಿ ವಾಹನ ಹಾವೇರಿಯಿಂದ ರಾಣೆಬೆನ್ನೂರಿನತ್ತ ಹೊರಟಿತ್ತು. ಇತ್ತ ಹೊನ್ನತ್ತಿ ಮತ್ತು ಕದರಮಂಡಲಗಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ವಾಪಸ್ ಆಗ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


