ಉಡುಪಿ: ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ರಾಜ್ಯ ಸರ್ಕಾರ ವೈ ಶ್ರೇಣಿಯ ಭದ್ರತೆ ಮಂಜೂರು ಮಾಡಿದೆ.ರಾಮಮಂದಿರ ನಿರ್ಮಾಣದ ಜನಜಾಗೃತಿ ಅಭಿಯಾನದಲ್ಲಿ ನಿರತಾಗಿರುವ ಶ್ರೀಗಳು, ದೇಶಾದ್ಯಂತ ಸಂಚಾರ ಕೈಗೊಂಡಿದ್ದಾರೆ. ಅಲ್ಲಲ್ಲಿ ಸಭೆ, ಸಮಾರಂಭ, ಕಾರ್ಯಕ್ರಮ ಉದ್ಘಾಟನೆ, ಧನ ಸಂಗ್ರಹ ಕಚೇರಿ ತೆರೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.ಸೂಕ್ತ ಭಧ್ರತೆ ಒದಗಿಸುವ ಶಾಸಕರ ಮನವಿಗೆ ತ್ವರಿತವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೇಜಾವರಶ್ರೀ ಗಳಿಗೆ ವೈ ಶ್ರೇಣಿಯ ಭದ್ರತೆಯನ್ನು ಒದಗಿಸಿದ್ದಾರೆ. ಸ್ವಾಮೀಜಿಯವರ ವಾಹನಕ್ಕೆ ಇನ್ನು ಒಂದು ಪೊಲೀಸ್ ಬೆಂಗಾವಲು ವ್ಯವಸ್ಥೆ ಇರಲಿದೆ.ಭದ್ರತೆ ನೀಡಿದ್ದಕ್ಕೆ ಸಿಎಂ ಯಡುಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಡುಪಿ ಶಾಸಕ ರಘುಪತಿ ಭಟ್ ಹಾಗೂ ರಾಜ್ಯ ಪೋಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಉಡುಪಿ ಪೇಜಾವರ ಮಠ ಕೃತಜ್ಞತೆ ಸಲ್ಲಿಸಿದೆ.Sign in to your account
Username or Email Address


Password

 Remember Me


