ಪ್ರಣಯ ರಾಜ ಎಂದಾಕ್ಷಣ ನೆನಪಾಗೋದು ಎಂದೂ ಮರೆಯದ ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಾಥ್. ಈಗ ಇದೇ ‘ಪ್ರಣಯ ರಾಜ’ ಟೈಟಲ್ ತಮ್ಮ ಸಿನಿಮಾಗಿಟ್ಟು ತೆರೆ ಮೇಲೆ ಮಿಂಚಲು ಹೊರಟಿದ್ದಾರೆ ನಟ, ಬಿಗ್ ಬಾಸ್ ಸ್ಪರ್ಧಿ ಭುವನ್ ಪೊನ್ನಣ್ಣ. ರಾಂಧವ ಸಿನಿಮಾ ನಂತರ ಭುವನ್ ‘ಪ್ರಣಯ ರಾಜ’ನಾಗಿ ತೆರೆ ಮೇಲೆ ಬರಲು ಸಿದ್ದರಾಗಿದ್ದು, ‘ಪ್ರಣಯರಾಜ’ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ.ಭುವನ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದ್ದು, ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿರುವ ಭುವನ್, ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರೋ ಚಿತ್ರತಂಡ, ಹೊಸ ವರ್ಷದಿಂದ ಚಿತ್ರದ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಸುಮಾರು 21 ನಟಿಮಣಿಯರು ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡುತ್ತಿರೋದು ‘ಪ್ರಣಯ ರಾಜ’ ಚಿತ್ರದ ವಿಶೇಷ ಸಂಗತಿ.ಬೇರೆ ಬೇರೆ ಚಿತ್ರರಂಗದ ಸುಮಾರು 21 ನಾಯಕಿಯರು ಈ ಚಿತ್ರದಲ್ಲಿ ಕಾಣಸಿಗಲಿದ್ದಾರೆ ಎಂದು ಚಿತ್ರತಂಡ ತಿಳಿಸಿದ್ದು, ಸದ್ಯದಲ್ಲೇ ಆ ಬಗ್ಗೆ ಹೆಚ್ಚಿನ ಮಾಹಿತಿ ನೀಡೋದಾಗಿ ತಿಳಿಸಿದೆ. ಚಿತ್ರದಲ್ಲಿ ಭುವನ್ ಗೆ ಜೋಡಿಯಾಗಿ ಮೂವರು ನಾಯಕಿಯರು ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ‘ಪ್ರಣಯ ರಾಜ’ ರೊಮ್ಯಾಂಟಿಕ್ ಕಾಮಿಡಿ ಜಾನರ್ ಚಿತ್ರವಾಗಿದ್ದು, ಟಿ.ಸುದರ್ಶನ್ ಚಕ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ರಾಜ ಶಿವ ಶಂಕರ್ ಛಾಯಾಗ್ರಹಣ, ವಿಕಾಸ್ ರಾಜ್ ವಸಿಷ್ಠ ಸಂಗೀತ ನಿರ್ದೇಶನ ಚಿತ್ರಕ್ಕಿದೆ.ಕೆಜಿಎಫ್ ಖ್ಯಾತಿಯ ಸಾಹಸ ನಿರ್ದೇಶಕ ವಿಕ್ರಂ ಮೋರ್ ನಿರ್ದೇಶನದಲ್ಲಿ ಚಿತ್ರದ ಆಕ್ಷನ್ ಸೀನ್ ಗಳು ಮೂಡಿ ಬರಲಿದ್ದು, ಸದ್ಯದಲ್ಲೇ ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಚಿತ್ರ ತಂಡ ನೀಡಲಿದೆ.Sign in to your account
Username or Email Address


Password

 Remember Me


