ಬೆಳಗಾವಿ: ಇಂದು ಬೆಳಗ್ಗೆ ಸುಮಾರು ಎಂಟು ಗಂಟೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಮಹಿಳಾ ಭದ್ರತಾ ಸಿಬ್ಬಂದಿ ಕೊಲೆ ನಡೆದಿದೆ. ಮಹಿಳೆಯನ್ನ ಕೊಲೆಗೈದ ಪಾಗಲ್ ಪ್ರೇಮಿಯನ್ನ ಪೊಲೀಸರು ಬಂಧಿಸಿದ್ದಾರೆ.ಬೈಲಹೊಂಗಲ ತಾಲೂಕಿನ ಮೂಗಬಸವ ಗ್ರಾಮದ ನಿವಾಸಿ ಸುಧಾರಣಿ ಕೊಲೆಯಾದ ಮಹಿಳೆ. ನೈಟ್ ಡ್ಯೂಟಿ ಮುಗಿಸಿ ಆಸ್ಪತ್ರೆಯಿಂದ ಹೊರಬಂದ ಸುಧಾರಾಣಿ ಅವರನ್ನ ಈರಣ್ಣಾ ಜಗಜಂಪಿ ಎಂಬಾತ ತಲ್ವಾರ್ ನಿಂದ ಕೊಚ್ಚಿ ಕೊಲೆಗೈದಿದ್ದಾನೆ.ಪತಿಯಿಂದ ದೂರವಾಗಿದ್ದ ಸುಧಾರಾಣಿ: ಕೆಲ ವರ್ಷಗಳ ಸುಧಾರಣಿಯನ್ನ ಖಾನಾಪುರ ತಾಲೂಕಿನ ಮಾಶಾನಟ್ಟಿ ಗ್ರಾಮದ ವ್ಯಕ್ತಿಯ ಜತೆ ಮದುವೆ ಮಾಡಿಕೊಡಲಾಗಿತ್ತು. ಇವರಿಗಿದ್ದ ಹೆಣ್ಣು ಮಗುವೂ ಸಹ ಒಂಬತ್ತು ತಿಂಗಳಲ್ಲೇ ಅನಾರೋಗ್ಯದಿಂದ ಮೃತಪಟ್ಟಿತ್ತು. ಬಳಿಕ ಮಕ್ಕಳಾಗದ ಹಿನ್ನೆಲೆ ಪತಿ ಮತ್ತು ಆತನ ಕುಟುಂಬಸ್ಥರು ಸುಧಾರಾಣಿಗೆ ಕಿರುಕುಳ ನೀಡುತ್ತಿದ್ದರಂತೆ. ಅಷ್ಟೇ ಅಲ್ಲದೆ ಅದೊಂದು ದಿನ ಸುಧಾರಾಣಿಗೆ ಬೆಂಕಿ ಹಚ್ಚಿ ಕೊಲೆ ಯತ್ನ ಕೂಡ ಮಾಡಿದ್ದರಂತೆ. ಇದರಿಂದ ಬೇಸತ್ತು ತವರು ಮನೆ ಬಂದಿದ್ದ ಸುಧಾರಾಣಿ ಕೆಲ ವರ್ಷ ಹಿಂದೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ್ದರು.ಸುಧಾರಾಣಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಈರಣ್ಣಾ ಜಗಜಂಪಿ ನಂತರ ತಲ್ವಾರ್ ಹಿಡಿದು ಅಲ್ಲೇ ನಿಂತು ಸ್ಥಳೀಯರನ್ನು ಹೆದರಿಸುತ್ತಿದ್ದ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಈರಣ್ಣನಿಂದ ತಲ್ವಾರ್ ಕಿತ್ತುಕೊಂಡು ವಶಕ್ಕೆ ಪಡೆದಿದ್ದಾರೆ. ಈರಣ್ಣಾ ಕೆಲ ವರ್ಷಗಳ ಹಿಂದೆ ಸುಧಾರಾಣಿಗೆ ಪರಿಚಿತನಾಗಿದ್ದನು. ಬಳಿಕ ಈರಣ್ಣಾ ಪಾಗಲ್ ಪ್ರೇಮಿಯಂತೆ ವರ್ತಿಸಲು ಆರಂಭಿಸಿದ್ದನು.ತನ್ನ ಮದುವೆ ಆಗುವಂತೆ ಪೀಡಿಸುತ್ತಿದ್ದನಲ್ಲದೇ ಸುಧಾರಾಣಿ ಊರಿಗೆ ಹೋಗಿ ಗಲಾಟೆ ಮಾಡಿದ್ದ. ಈ ವೇಳೆ ತರಾಟೆಗೆ ತೆಗೆದುಕೊಂಡಿದ್ದ ಪೋಷಕರು ಬುದ್ಧಿವಾದ ಹೇಳಿ ಕಳಿಸಿದ್ರು. ಇಷ್ಟಾದರೂ ಕೇಳದ ಆತ ಸುಧಾರಾಣಿಗೆ ಕಳೆದ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಹೆರಿಗೆ ವಾರ್ಡ್ ಗೆ ಬಂದು ಬೆಳಗ್ಗೆವರೆಗೂ ಸುಧಾರಾಣಿ ಜೊತೆ ಗಲಾಟೆ ಮಾಡಿಕೊಂಡಿದ್ದ. ಇಷ್ಟಕ್ಕೆ ಸುಮ್ಮನಾಗದ ಪಾಪಿ ಬೆಳಗ್ಗೆ ಡ್ಯೂಟಿ ಮುಗಿಸಿ ಸುಧಾರಾಣಿ ಹೊರ ಬರುತ್ತಿದ್ದಂತೆ ತಲ್ವಾರ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ.  Sign in to your account
Username or Email Address


Password

 Remember Me


