ಬೆಂಗಳೂರು: ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರಿಗೆ ಬ್ರಿಟನ್ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಯುಕೆ ವಾಪಸಿಗರ ಪೈಕಿ 107 ಜನರಿಗೆ ಆರ್.ಟಿ-ಪಿಸಿಆರ್ ಪಾಸಿಟಿವ್ ಬಂದಿತ್ತು. ಇವರೆಲ್ಲರ ಮಾದರಿಯನ್ನ ಸೀಕ್ವೆನ್ಸ್ ಪರೀಕ್ಷೆ ಮಾಡಲಾಗಿತ್ತು. 107ರಲ್ಲಿ 20 ಜನರಿಗೆ ರೂಪಾಂತರಿ ವೈರಸ್ ಕಂಡು ಬಂದಿದೆ. ಬೆಂಗಳೂರು 3 ಮತ್ತು ಶಿವಮೊಗ್ಗದ ನಾಲ್ವರಲ್ಲಿ ಹೊಸ ರೂಪಾಂತರ ವೈರಸ್ ಕಂಡು ಬಂದಿದ್ದು, ಸೋಂಕಿತರ ಸಂಪರ್ಕಿತರನ್ನ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಬೆಂಗಳೂರಿನ ಮೂವರು 39 ಜನರೊಂದಿಗೆ ಸಂಪರ್ಕ ಹೊಂದಿದ್ದರು. ಶಿವಮೊಗ್ಗ ಸೋಂಕಿತರ ಸಂಪರ್ಕದಲ್ಲಿದ್ದವರ ಕೆಲವರ ವರದಿ ಪಾಸಿಟಿವ್ ಬಂದಿದೆ ಎಂದು ಹೇಳಿದರು.ಸೋಂಕಿತರ ಆರೋಗ್ಯ ಸ್ಥಿರವಾಗಿದ್ದು, ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೈರಸ್ ತೀವ್ರತೆ ಕಡಿಮೆ, ಆದ್ರೆ ಹರಡುವ ಗುಣ ಶೇ.70ಕ್ಕಿಂತ ಅಧಿಕ. ಹಾಗಾಗಿ ಸರ್ಕಾರ ಕೊರೊನಾ ಹರಡುವಿಕೆಯನ್ನ ತಡೆಯುವ ಕೆಲಸ ಮಾಡುತ್ತಿದೆ. ನಾಪತ್ತೆ ಆಗಿರುವ ಕೆಲವರ ಶೋಧದಲ್ಲಿ ಗೃಹ ಇಲಾಖೆ ತೊಡಗಿಕೊಂಡಿದೆ ಎಂದು ತಿಳಿಸಿದರು.


 Advertisement 







 Advertisement 




Sign in to your account
Username or Email Address


Password

 Remember Me


