ಕೊಪ್ಪಳ: ಬ್ಯಾಲೆಟ್ ಪೇಪರ್ ನ್ನು ಚುನಾವಣಾ ಸಿಬ್ಬಂದಿ ಸ್ಕೇಲ್ ನಿಂದ ಅಳೆದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಗವಿಸಿದ್ದೇಶ್ವರ ಪ್ರೌಢ ಶಾಲೆಯ ಮತ ಎಣಿಕೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಅಭ್ಯರ್ಥಿಗಳ ಚಿಹ್ನೆ ನಡುವೆ ಮತದಾರರ ಮತ ಚಲಾಯಿಸಿದ್ದರು.ಗೊಂಡಬಾಳ ಗ್ರಾಪಂನ ಮುದ್ದಾಬಳ್ಳಿ ಒಂದನೇ ವಾರ್ಡಿನ ಮತ ಎಣಿಕೆ ನಡೆದಿತ್ತು. ಟಿವಿ ಚಿನ್ಹೆಯ ಗಾಳೆಪ್ಪ ಪೂಜಾರ ಹಾಗೂ ಆಟೋ ಚಿನ್ಹೆಯ ಮಧ್ಯೆ ಮತದಾರನೋರ್ವ ಮತ ಚಲಾಯಿಸಿದ್ದ. ಈ ಮತ ಎಣಿಕೆಯಿಂದ ಹೊರ ಗಿಟ್ಟು ಮತ ಎಣಿಕೆ ಮಾಡಲಾಗಿತ್ತು.ಕೊನೆಗೆ ಚುನಾವಣಾ ಅಧಿಕಾರಿ ಬ್ಯಾಲೆಟ್ ಪೇಪರ್ ಸ್ಕೇಲ್ ನಿಂದ ಅಳತೆ ಮಾಡಲಾಯ್ತು. ಟಿವಿ ಚಿನ್ಹೆಗೆ ಮತಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದ ಹಿನ್ನೆಲೆ ಗಾಳೆಪ್ಪ ಪೂಜಾರ ಅವರಿಗೆ ಮತ ಎಂದು ಘೋಷಣೆ ಮಾಡಲಾಯ್ತು. Sign in to your account
Username or Email Address


Password

 Remember Me


