ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ಪುತ್ರಿ ನಿಹಾರಿಕಾ ಮದುವೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ರೆಸಾರ್ಟ್ ನಲ್ಲಿ ನಡೆದಿದೆ. ಗೆಳೆಯ ಅಕ್ಷಯ್ ಜೊತೆ ನಿಹಾರಿಕಾ ಸಪ್ತಪದಿ ತುಳಿದರು.ಕೊರೊನಾ ಹಿನ್ನೆಲೆ ಮದುವೆ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅಕ್ಷಯ್ ಸಿನಿಮಾ ಕ್ಷೇತ್ರದವರಲ್ಲ ಬದಲಿಗೆ ನಿಹಾರಿಕಾ ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡೂ ಕುಟುಂಬದವರ ಸಮ್ಮುಖದಲ್ಲಿ ಮದುವೆ ನಡೆದಿದೆ.2021ರ ಜನವರಿ 16ರಂದು ಆರತಕ್ಷತೆ ನಡೆಯಲಿದೆ. ಅಂದು ಚಿತ್ರರಂಗ ಸೇರಿದಂತೆ ಎಲ್ಲ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ನನ್ನ ಮಗಳು ನಿಹಾರಿಕ ಹಾಗೂ ಅಕ್ಷಯ್ ವಿವಾಹ ಇಂದು ನಡೆಯಿತು. ನಿಮ್ಮ ಪ್ರೀತಿಯ ಆಶೀರ್ವಾದ ಈ ಹೊಸ ಜೋಡಿ ಮೇಲೆ ಸದಾ ಇರಲಿ ಎಂದು ರಮೇಶ್ ಅರವಿಂದ್ ವಿನಂತಿಸಿದ್ದಾರೆ.Sign in to your account
Username or Email Address


Password

 Remember Me


