ಮೈಸೂರು: ಪವಿತ್ರವಾದ ತಿರುಪತಿ ತಿಮ್ಮಪ್ಪನ (Tirupati Laddu Row) ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಹಾಕುವಂತಹ ಕುಕೃತ್ಯ ಮಾಡಿ ಹಿಂದೂಗಳ ನಂಬಿಕೆ ಹೊಡೆಯುವ ಕೆಲಸವನ್ನು ಜಗನ್‌ ಮೋಹನ್‌ ರೆಡ್ಡಿ ಎಂಬ ಕ್ರೈಸ್ತ ಮಾಡಿದ್ದಾನೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಕಿಡಿಕಾರಿದರು.ತಿರುಪತಿ ಲಡ್ಡು ವಿವಾದ ಕುರಿತು ಮಾತನಾಡಿದ ಅವರು, ಜಮ್ಮು-ಕಾಶ್ಮೀರ ಒಂದು ರಾಜ್ಯ ಮುಸಲ್ಮಾನರ ಕೈಗೆ ಹೋದ ಕೂಡಲೇ ಅಲ್ಲಿರುವಂತಹ ಕಾಶ್ಮೀರಿ ಪಂಡಿತರನ್ನು ಸಾರಾಸಗಟಾಗಿ ಆಚೆ ದಬ್ಬಿದರು. ಆಂಧ್ರಪ್ರದೇಶ ರಾಜ್ಯ ಕ್ರೈಸ್ತನ ಕೈಗೆ ಸಿಕ್ಕಿತು. ಪವಿತ್ರವಾದ ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಹಾಕುವಂತಹ ಕುಕೃತ್ಯ ಮಾಡಿ ಹಿಂದೂಗಳ ನಂಬಿಕೆ ಹೊಡೆಯುವ ಕೆಲಸವನ್ನು ಜಗನ್‌ ಮೋಹನ್‌ ರೆಡ್ಡಿ ಎಂಬ ಕ್ರೈಸ್ತ ಮಾಡಿದ್ದಾನೆ. ಇನ್ನಾದರೂ ಹಿಂದೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ತಿರುಪತಿ ದೇವಾಲಯ ಪವಿತ್ರೋತ್ಸವ – ಹಾಲು, ಮೊಸರು, ತುಪ್ಪ, ಗೋಮೂತ್ರ, ಸಗಣಿ ಬಳಸಿ ದೇವಸ್ಥಾನ ಶುದ್ಧೀಕರಣಮುಸಲ್ಮಾನರ ಸಂಖ್ಯಾ ಬಾಹುಳ್ಯ ಮತ್ತು ಕ್ರೈಸ್ತರ ಮತಾಂತರದ ಬಗ್ಗೆ ಹಿಂದೂಗಳು ಅರ್ಥ ಮಾಡಿಕೊಳ್ಳಬೇಕು. ಮುಸಲ್ಮಾನರು ಮತ್ತು ಕ್ರೈಸ್ತರ ಕೈಗೆ ಹೀಗೆಯೇ ಒಂದೊಂದು ರಾಜ್ಯಗಳು ಹೋಗುತ್ತಿದ್ದರೆ, ಮುಂದೊಂದು ದಿನ ಭಾರತದಿಂದ ಹಿಂದೂಗಳೇ ಪಲಾಯನ ಮಾಡುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂಬುದನ್ನು ತಿರುಪತಿ ತಿಮ್ಮಪ್ಪನ ಲಡ್ಡು ಘಟನೆಯಿಂದ ನೀವು ಅರಿಯಬೇಕು ಎಂದು ಎಚ್ಚರಿಸಿದರು.Sign in to your account
Username or Email Address


Password

 Remember Me


