ಕಾರವಾರ: ಎರಡು ದಿನಗಳ ಹಿಂದೆ ಕೊರೊನಾ ವಾರ್ಡಿನಿಂದ ಫೋನ್ ಕದ್ದು ಪರಾರಿಯಾಗಿದ್ದ ಸೋಂಕಿತ ಕಳ್ಳ ಮತ್ತೊಮ್ಮೆ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.ಶಿರಸಿಯಲ್ಲಿ ವಾಹನ ಕಳ್ಳತನ ಆರೋಪದಡಿ ಬಂಧಿಯಾಗಿದ್ದ ಕೊರೊನಾ ಸೋಂಕಿತ ಕಾರವಾರದ ಕಿಮ್ಸ್ ಕೋವಿಡ್ ವಾರ್ಡ್‍ನಿಂದ ತಪ್ಪಿಸಿಕೊಂಡು ಪರಾರಿಯಾಗಿ ಕಾರವಾರದ ಕದ್ರಾ ಗ್ರಾಮದಲ್ಲಿ ಪೊಲೀಸರ ಅಥಿತಿಯಾಗಿದ್ದ. ಆತನನ್ನ ಮತ್ತೆ ಕಾರವಾರದ ಕಿಮ್ಸ್ ಆಸ್ಪತ್ರೆಯ ವಿಶೇಷ ಕೊರೊನಾ ವಾರ್ಡಿಗೆ ತಂದು ಆಡ್ಮಿಟ್ ಮಾಡಲಾಗಿತ್ತು. ಈಗ ಮತ್ತೆ ಆಸ್ಪತ್ರೆಯಿಂದ ಆತ ಪರಾರಿಯಾಗಿದ್ದು, ಕಾರವಾರ ಪೊಲೀಸರು ಹುಡುಕಾಟ ನಡೆಸಿದ್ದಾರೆ.ಕಳ್ಳತನ ಕೇಸ್‍ನಲ್ಲಿ ಭಾಗಿಯಾಗಿದ್ದ ಧಾರವಾಡ ಮೂಲದ ಆರೋಪಿಗೆ ಜೂನ್ 28ರಂದು ಪಾಸಿಟಿವ್ ಬಂದಿತ್ತು. ಈ ಆರೋಪಿಯನ್ನು ಕಾರವಾರದ ಕಿಮ್ಸ್‍ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೇ ಆತ ಜೂನ್ 29ರ ರಾತ್ರಿ ವೇಳೆ ಕೋವಿಡ್ ವಾರ್ಡಿನ ಗಾಜನ್ನು ಒಡೆದು ಅಲ್ಲಿಂದ ಎರಡು ಮೊಬೈಲ್ ಎಗರಿಸಿ ಎಸ್ಕೇಪ್ ಆಗಿದ್ದ. ಪೊಲೀಸರ ಹರಸಾಹಸದ ನಂತರ ಕಾರವಾರದ ಕದ್ರ ಗ್ರಾಮದ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಮತ್ತೆ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಜನರಿಗೆ ಆತಂಕ ಎದುರಾಗಿದೆ.Sign in to your account
Username or Email Address


Password

 Remember Me


