ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮತ್ತೆ 503 ಮಂದಿಗೆ ಸೋಂಕು ಬಂದಿದ್ದು, ರಾಜ್ಯದಲ್ಲಿ ಇಂದು 947 ಪ್ರಕರಣಗಳು ವರದಿಯಾಗಿದೆ.ಒಟ್ಟು 20 ಮಂದಿ ಮೃತಪಟ್ಟಿದ್ದು, ಇಂದು 235 ಮಂದಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 7,074 ಸಕ್ರಿಯ ಪ್ರಕರಣಗಳಿದ್ದು, 7,918 ಮಂದಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 246 ಮಂದಿ ಸೋಂಕಿಗೆ ರಾಜ್ಯದಲ್ಲಿ ಬಲಿಯಾಗಿದ್ದಾರೆ. ಒಟ್ಟು 15,242 ಮಂದಿಗೆ ಸೋಂಕು ಬಂದಿದೆ.ಬೆಂಗಳೂರಿನಲ್ಲಿ 503 ಮಂದಿಗೆ ಬಂದಿದ್ದರೆ ಇಂದು 10 ಮಂದಿ ಮಾತ್ರ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 4,555ಕ್ಕೆ ಏರಿಕೆಯಾಗಿದ್ದು, 3,916 ಸಕ್ರಿಯ ಪ್ರಕರಣಗಳಿವೆ.ಎಲ್ಲಿ ಎಷ್ಟು ಮಂದಿ?
ಬೆಂಗಳೂರು ನಗರ 503, ಬಳ್ಳಾರಿ 61, ಹಾವೇರಿ 49, ದಕ್ಷಿಣ ಕನ್ನಡ 44, ಉತ್ತರ ಕನ್ನಡ 40, ವಿಜಯಪುರ 39, ಶಿವಮೊಗ್ಗ 22, ಬೆಂಗಳೂರು ಗ್ರಾಮಾಂತರ 21, ಬೀದರ್‌ 17, ಧಾರವಾಡ 17 ಹಾಸನ 16, ಕಲಬುರಗಿ 15, ರಾಯಚೂರು 15, ಚಿಕ್ಕಬಳ್ಳಾಪುರ 13, ದಾವಣಗೆರೆ 12, ರಾಮನಗರ 12, ಚಿಕ್ಕಮಗಳೂರು 10, ಉಡುಪಿ 9, ಮೈಸೂರು 9, ಬಾಗಲಕೋಟೆ 4, ಕೊಡಗು 4, ಕೋಲಾರ 3, ಚಿತ್ರದುರ್ಗ 3, ಯಾದಗಿರಿ 2, ಮಂಡ್ಯ 2, ಬೆಳಗಾವಿ 2, ಗದಗ 2, ತುಮಕೂರು 1 ಪ್ರಕರಣ ದೃಢಪಟ್ಟಿದೆ.ಎಷ್ಟು ಮಂದಿ ಬಿಡುಗಡೆ?
ಇಂದು 235 ಮಂದಿ ಬಿಡುಗಡೆಯಾಗಿದ್ದಾರೆ. ಬಳ್ಳಾರಿ 92, ಕಲಬುರಗಿ 47, ವಿಜಯಪುರ 15, ಮೈಸೂರು 14, ಉಡುಪಿ 11, ಬೀದರ್‌ 11, ಬೆಂಗಳೂರು ನಗರ 10, ದಾವಣಗೆರೆ 8, ಕೊಪ್ಪಳ 6, ಹಾಸನ 6, ಧಾರವಾಡ 5, ಬೆಳಗಾವಿ 3, ಚಿತ್ರದುರ್ಗ 2, ಯಾದಗಿರಿ 2, ದಕ್ಷಿಣ ಕನ್ನಡ , ಚಿಕ್ಕಮಗಳೂರು, ಕೋಲಾರದಲ್ಲಿ ತಲಾ ಒಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಐಸಿಯುನಲ್ಲಿ ಎಷ್ಟು ಮಂದಿ?
ಒಟ್ಟು 271 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು 171, ಧಾರವಾಡ 17, ಕಲಬುರಗಿ 14, ಬೀದರ್‌ 8, ದಕ್ಷಿಣ ಕನ್ನಡ 8, ಬಳ್ಳಾರಿ 7, ಹಾಸನ 6, ಮೈಸೂರು 5, ದಾವಣಗೆರೆ 4, ಗದಗ 4, ರಾಯಚೂರು 4, ಉಡುಪಿ, ವಿಜಯಪುರ, ಚಾಮರಾಜನಗರ, ತುಮಕೂರು, ಕೋಲಾರ, ಕೊಪ್ಪಳ, ಬೆಳಗಾವಿ, ಕೊಡಗು, ಉತ್ತರ ಕನ್ನಡ, ಬಾಗಲಕೋಟೆಯಲ್ಲಿ ತಲಾ ಒಬ್ಬರು ಐಸಿಯುನಲ್ಲಿದ್ದಾರೆ.Sign in to your account
Username or Email Address


Password

 Remember Me


