ಬಳ್ಳಾರಿ: ಮಹಾಮಾರಿ ಕೊರೊನಾ ವೈರಸ್ ರಾಜ್ಯಕ್ಕೆ ವಕ್ಕರಿಸಿದ ಬಳಿಕ ದಿನಕ್ಕೊಂದು ಅಮಾನವೀಯ ಘಟನೆಗಳು ನಡೆಯುತ್ತಲೇ ಇವೆ. ಇದೇ ಸಾಲಿಗೆ ಇದೀಗ ಬಳ್ಳಾರಿಯಲ್ಲೊಂದು ನಡೆದಿರುವ ಘಟನೆ ಕೂಡ ಸೇರಿಕೊಂಡಿದೆ.ಹೌದು. ಬಳ್ಳಾರಿಯಲ್ಲಿ ಕೊರೊನಾಗೆ ಬಲಿಯಾದವರ ಶವಗಳನ್ನು ಗುಂಡಿಗೆ ಬಿಸಾಕಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ.ಬಳ್ಳಾರಿಯಲ್ಲಿ ಸೋಮವಾರ ಒಂದೇ ದಿನ 9 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಒಂದೇ ಜಾಗದಲ್ಲಿ ಶವ ಸಂಸ್ಕಾರ ಮಾಡಿದೆ. ಬಳ್ಳಾರಿಯ ಹೊರವಲಯದಲ್ಲಿ ಶವ ಸಂಸ್ಕಾರ ಮಾಡಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.ಈ ಮೂಲಕ ಕೊರೊನಾ ಸೋಂಕಿನಿಂದ ಸತ್ತರೆ ಹೇಗೆ ಶವಸಂಸ್ಕಾರ ಮಾಡುತ್ತಾರೆ ಎನ್ನುವುದಕ್ಕೆ ಇದೊಂದು ವಿಡಿಯೋನೇ ಸಾಕ್ಷಿಯಾಗಿದ್ದು, ಜನ ಇಲಾಖೆ ವಿರುದ್ಧ ಕಿಡಿಕಾರುತ್ತಿದ್ದಾರೆ.






 Advertisement 




Sign in to your account
Username or Email Address


Password

 Remember Me


