ಶಿವಮೊಗ್ಗ: ತಾಯಿಯೊಂದಿಗೆ ಪಾರ್ಕ್ ನಲ್ಲಿ ಹುಲ್ಲು ಮೇಯುತ್ತಿದ್ದಾಗ ಪಾರ್ಕ್ ನಲ್ಲಿ ಅಳವಡಿಸಿದ್ದ ಗ್ರಿಲ್ ಗೆ ಸಿಲುಕಿಕೊಂಡ ಪರಿಣಾಮ ಮರಿ ಕುದುರೆಯ ಕರುಳು ಹೊರ ಬಂದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.ಶಿವಮೊಗ್ಗದ ವಿನೋಬನಗರದ ಪಾರ್ಕ್‍ನಲ್ಲಿ ತಾಯಿ ಕುದುರೆಯೊಂದಿಗೆ ಮರಿ ಕುದುರೆ ಹುಲ್ಲು ಮೇಯುತಿತ್ತು. ಈ ವೇಳೆ ಪಾರ್ಕ್‍ನಿಂದ ತಾಯಿ ಕುದುರೆ ಮರೆಯಾಗಿದೆ. ಇದನ್ನು ಗಮನಿಸದ ಮರಿ ಕುದುರೆ ಅಲ್ಲಿಯೇ ಹುಲ್ಲು ಮೇಯುತಿತ್ತು. ನಂತರ ಪಾರ್ಕ್ ನಿಂದ ಹೊರ ಬರಲಾರದೇ ಚಡಪಡಿಸಿದೆ. ಅಲ್ಲದೇ ಪಾರ್ಕ್ ಅಳವಡಿಸಿದ್ದ ಗ್ರಿಲ್ ದಾಟಿ ಹೋಗಲು ಪ್ರಯತ್ನಿಸಿದೆ.ಆದರೆ ಈ ವೇಳೆ ಗ್ರಿಲ್‍ಗೆ ಅಳವಡಿಸಿದ್ದ ಚೂಪಾದ ಭರ್ಜಿಗೆ ಸಿಲುಕಿಕೊಂಡ ಕುದುರೆಯ ಕರುಳು ಹೊಟ್ಟೆ ಭಾಗದಿಂದ ಹೊರಬಂದಿದೆ. ನಂತರ ಕುದುರೆ ಅಲ್ಲಿಯೇ ನರಳಾಡುತ್ತಿದ್ದ ದೃಶ್ಯ ಗಮನಿಸಿದ ಯುವಕರು ತಕ್ಷಣವೇ ಪಶು ವೈದ್ಯರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯರು ಸ್ಥಳದಲ್ಲಿಯೇ ಕುದುರೆಗೆ ಶಸ್ತ್ರಚಿಕಿತ್ಸೆ ನಡೆಸಿ ಕರಳನ್ನು ಉದರದ ಒಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.Sign in to your account
Username or Email Address


Password

 Remember Me


