ಬೆಂಗಳೂರು: ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ನ್ಯೂಟೌನ್ ವ್ಯಾಪ್ತಿಯ ಅನಂತಪುರದಲ್ಲಿ ನಡೆದಿದೆ.ಅನಂತಪುರ ನಿವಾಸಿ ಮುನಿ ವೆಂಕಟಪ್ಪ (54), ಪತ್ನಿ ನಾಗಮಣಿ (50) ಮತ್ತು ಮಗ ರವಿ ಕುಮಾರ್ (27) ನೇಣಿಗೆ ಶರಣಾದ ಕುಟುಂಬ. ಗಂಡ, ಹೆಂಡತಿ ಹಾಗೂ ಮಗ ಮೂವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ವೆಂಕಟಪ್ಪ ಕುಟುಂಬ ಯಲಹಂಕ ಉಪನಗರದಲ್ಲಿ ವಾಸವಿದ್ದರು. ವೆಂಕಟಪ್ಪ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ತಂದೆಗೆ ಮಗ ರವಿ ಕುಮಾರ್ ಸಹಾಯ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.ವೆಂಕಟಪ್ಪ ತಮ್ಮ ಸ್ನೇಹಿತರ ಬಳಿ ಲಕ್ಷಾಂತರ ಸಾಲ ಪಡೆದಿದ್ದ. ಆದರೆ ಅದನ್ನು ವಾಪಸ್ಸು ಕೊಡಲು ಸಾಧ್ಯವಾಗಿಲ್ಲ. ಹೀಗಾಗಿ ಇದರಿಂದ ನೊಂದು ಪತ್ನಿ ಮತ್ತು ಮಗನ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಯಲಹಂಕ ನ್ಯೂಟೌನ್ ಠಾಣಾ ಪೊಲೀಸರು ಮೂವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಘಟನೆ ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.Sign in to your account
Username or Email Address


Password

 Remember Me


