ಹಾವೇರಿ: ಜಿಲ್ಲೆಯ ಹಲವೆಡೆ ಇಂದು ಭಾರೀ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನೊಂದೆಡೆ ರೇಲ್ವೆ ಅಂಡರ್ ಬ್ರಿಡ್ಜ್‍ಗೆ ನೀರು ನುಗ್ಗಿದ್ದಕ್ಕೆ ವಾಹನ ಸವಾರರು ಪರದಾಡಿದ್ದಾರೆ.ಜಿಲ್ಲೆಯ ಸವಣೂರು ತಾಲೂಕಿನ ಯಲವಗಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಭರ್ಜರಿ ಮಳೆಯಾಗಿದೆ. ಮಳೆಯಿಂದಾಗಿ ರೈಲ್ವೆ ಅಂಡರ್ ಬ್ರಿಡ್ಜ್ ಗೆ ನೀರು ನುಗ್ಗಿದ್ದು, ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಹಾವೇರಿ ತಾಲೂಕಿನ ಕರ್ಜಗಿ, ಯಲಗಚ್ಚ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಹ ಧಾರಾಕಾರ ಮಳೆಯಾಗಿದೆ. ಉತ್ತಮ ಮಳೆ ಆಗಿದ್ದರಿಂದ ಜಿಲ್ಲೆಯ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಮಳೆಯಿಂದಾಗಿ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿದೆ.Sign in to your account
Username or Email Address


Password

 Remember Me


