ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ದಿನ ಮಹಾಮಾರಿ ಕೊರೊನಾ ಸೋಂಕಿಗೆ ಎಂಟು ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 22ಕ್ಕೇರಿಯಾಗಿದೆ.ನೆರೆಯ ಆಂಧ್ರಪ್ರದೇಶ ಮೂಲದ ಕರ್ನೂಲ್ ಜಿಲ್ಲೆಯ ಆದೋನಿಯ 52 ವರ್ಷದ ಮಹಿಳೆ, ಕೊಪ್ಪಳ ಜಿಲ್ಲೆಯ ರಂಗಾಪುರ ಕ್ಯಾಂಪಿನ 43 ವರ್ಷದ ಪುರುಷ, ಹೊಸಪೇಟೆ ತಾಲೂಕಿನ ಧರ್ಮಸಾಗರದ 56 ವರ್ಷ ವಯೋಮಾನದ ಪುರುಷ, ಹೊಸಪೇಟೆಯ ಆಜಾದ ನಗರದ 66 ವರ್ಷದ ಪುರುಷ ಸೇರಿದಂತೆ ಇಂದು ಎಂಟು ಮಂದಿ ಸಾವನ್ನಪ್ಪಿದ್ದಾರೆಂದು ಡಿಸಿ ನಕುಲ್ ತಿಳಿಸಿದ್ದಾರೆ.ತೀವ್ರ ಉಸಿರಾಟದ ತೊಂದರೆ, ಜ್ವರ ಮತ್ತು ಕೆಮ್ಮು- ನೆಗಡಿಯಿಂದ ಬಳಲುತ್ತಿದ್ದ ಎಂಟು ಮಂದಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಸೋಂಕಿರುವುದು ದೃಢ ಪಟ್ಟಿತ್ತು. ಎಸ್‍ಒಪಿ ಅನ್ವಯ ಮೃತ ಎಂಟು ಮಂದಿಯ ಅಂತ್ಯಕ್ರಿಯೆಯನ್ನು ನಡೆಸಲಾಗುದೆಂದು ವಿವರಿಸಿದರು.Sign in to your account
Username or Email Address


Password

 Remember Me


