ಬೆಂಗಳೂರು: ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಮತ್ತೆ ಆನ್‍ಲೈನ್ ಕ್ಲಾಸ್‍ಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇನ್ಮುಂದೆ ಎಲ್‍ಕೆಜಿಯಿಂದ ಹಿಡಿದು ಎಸ್‍ಎಸ್‍ಎಲ್‍ಸಿವರೆಗೆ ಆನ್‍ಲೈನ್ ತರಗತಿಗಳನ್ನು ಮಾಡಬಹುದಾಗಿದೆ. ಆದರೆ ಕೆಲವು ನಿಯಮಗಳನ್ನ ಈ ವೇಳೆ ಪಾಲಿಸಬೇಕಿದೆ.ಸರ್ಕಾರ ರಚಿಸಿರುವ ತಜ್ಞರ ಸಮಿತಿಯ ವರದಿ ಬರುವವರೆಗೂ ಈ ನಿಯಮಗಳ ಅನುಸಾರವೇ ಆನ್‍ಲೈನ್ ತರಗತಿಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಬೇಕಾಗುತ್ತದೆ. ಆನ್‍ಲೈನ್ ತರಗತಿಗೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯುವಂತೆ ಇಲ್ಲ. ಇದಕ್ಕೆ ತಗುಲುವ ವೆಚ್ಚವನ್ನು ನಿಯಮಿತವಾಗಿ ವಾರ್ಷಿಕ ಬೋಧನಾ ಶುಲ್ಕದಿಂದಲೇ ಭರಿಸಬೇಕು ಎಂದು ಸರ್ಕಾರ ಅಧಿಕೃತ ಆದೇಶ ನೀಡಿದೆ.ಆನ್‍ಲೈನ್ ಕ್ಲಾಸ್‍ಗೆ ನಿಯಮಗಳು
* ಪೂರ್ವ ಪ್ರಾಥಮಿಕ- 30 ನಿಮಿಷಗಳಿಗೆ ಮೀರದಂತೆ ವಾರಕ್ಕೆ ಒಂದು ದಿನ ಆನ್‍ಲೈನ್ ಕ್ಲಾಸ್ (ಪಾಲಕರು ಜೊತೆಯಲ್ಲಿ ಇರುವುದು ಕಡ್ಡಾಯ)
* 1-5 ನೇ ತರಗತಿ- 30-45 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ದಿನ ಬಿಟ್ಟು ದಿನ ಆನ್‍ಲೈನ್ ಕ್ಲಾಸ್
* 6-8 ನೇ ತರಗತಿ – 30-40 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಆನ್‍ಲೈನ್ ಶಿಕ್ಷಣ
* 9-10 ನೇ ತರಗತಿ – 30-45 ನಿಮಿಷಗಳ 4 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಆನ್‍ಲೈನ್ ಕ್ಲಾಸ್Sign in to your account
Username or Email Address


Password

 Remember Me


