ಬೆಂಗಳೂರು: ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರ 47ನೇ ವರ್ಷದ ಜನ್ಮದಿನವಾಗಿದ್ದು, ಮಧ್ಯರಾತ್ರಿ ಪತ್ನಿ ಹಾಗೂ ಮಗಳು ಆಸ್ಪತ್ರೆಯಿಂದಲೇ ಶುಭಾಶಯ ತಿಳಿಸಿದ್ದಾರೆ.ಟಿಕ್ ಟಾಕ್ ವಿಡಿಯೋ ಮಾಡಿರುವ ಮಾಡಿರುವ ಸಚಿವರ ಪತ್ನಿ ಹಾಗೂ ಮಗಳು, ಹುಟ್ಟುಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ. ಅಪ್ಪ ನೀನು ಎಲ್ಲಾ ಸಮಯದಲ್ಲೂ ಖುಷಿಯಾಗರಬೇಕು. ಲವ್ ಯೂ ಅಪ್ಪ. ನಿಮ್ಮ ಪ್ರೀತಿಯನ್ನಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಡಿಯೋದಲ್ಲಿ ಬರೆದುಕೊಳ್ಳುವ ಮೂಲಕ ಅಪ್ಪನ ಹುಟ್ಟುಹಬ್ಬಕ್ಕೆ ಮಗಳು ಪ್ರೀತಿಯಿಂದ  ಶುಭ ಕೋರಿದ್ದಾಳೆ.ಆಸ್ಪತ್ರೆಯಿಂದ ರಾತ್ರಿ ೧೨ ಗಂಟೆಗೆ ನನ್ನ ಮಗಳು ಮತ್ತು ನನ್ನ ಪತ್ನಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ ತಿಳಿಸಿದ್ದಾರೆ. ಈ ವಿಡಿಯೋ ಉಡುಗೊರೆ ನನ್ನ ಜೀವನದಲ್ಲೇ ಮದುರವಾದದ್ದು, ಪವಿತ್ರಪ್ರೀತಿಯ ಸಂಕೇತ. ಮಿಸ್ ಯು ಮೈ ಏಂಜಲ್ಸ್ ????❤️???? pic.twitter.com/epxpGYfSEA— Dr Sudhakar K (@mla_sudhakar) June 26, 2020ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಆಸ್ಪತ್ರೆಯಿಂದ ರಾತ್ರಿ 12 ಗಂಟೆಗೆ ನನ್ನ ಮಗಳು ಮತ್ತು ನನ್ನ ಪತ್ನಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ ತಿಳಿಸಿದ್ದಾರೆ. ಈ ವಿಡಿಯೋ ಉಡುಗೊರೆ ನನ್ನ ಜೀವನದಲ್ಲೇ ಮಧುರವಾದದ್ದು, ಪವಿತ್ರ ಪ್ರೀತಿಯ ಸಂಕೇತ. ಮಿಸ್ ಯು ಮೈ ಏಂಜಲ್ಸ್ ಅಂತ ಬರೆದುಕೊಂಡಿದ್ದಾರೆ.ಇದಕ್ಕೂ ಮೊದಲು ಟ್ವೀಟ್ ಮಾಡಿರುವ ಸಚಿವರು, ಆತ್ಮೀಯ ಬಂಧುಗಳೇ, ತಮ್ಮೆಲ್ಲರ ಶುಭಹಾರೈಕೆ, ಆಶೀರ್ವಾದಗಳಿಂದ ನನ್ನ ಕುಟುಂಬ ಸದಸ್ಯರು ಕ್ಷೇಮದಿಂದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ನಾನು ಪ್ರಾಥಮಿಕ ಸಂಪರ್ಕಿತನಾಗಿ ಕ್ವಾರಂಟೈನ್ ನಲ್ಲಿರುವುದರಿಂದ, ನಾಳೆ ನನ್ನ ಜನ್ಮದಿನದಂದು ನೀವು ಇರುವಲ್ಲಿಂದಲೇ ಹಾರೈಸಿ, ಆಶೀರ್ವದಿಸಿ, ನಿಮ್ಮೆಲ್ಲರ ಪ್ರೀತಿ ಅಭಿಮಾನಗಳಿಗೆ ನಾನು ಚಿರಋಣಿಯಾಗಿದ್ದೇನೆ ಎಂದು ತಿಳಿಸಿದ್ದರು.ಆತ್ಮೀಯ ಬಂಧುಗಳೇ, ತಮ್ಮೆಲ್ಲರ ಶುಭಹಾರೈಕೆ, ಆಶೀರ್ವಾದಗಳಿಂದ ನನ್ನ ಕುಟುಂಬ ಸದಸ್ಯರು ಕ್ಷೇಮದಿಂದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ನಾನು ಪ್ರಾಥಮಿಕ ಸಂಪರ್ಕಿತನಾಗಿ ಕ್ವಾರಂಟೈನ್ ನಲ್ಲಿರುವುದರಿಂದ, ನಾಳೆ ನನ್ನ ಜನ್ಮದಿನದಂದು ನೀವು ಇರುವಲ್ಲಿಂದಲೇ ಹಾರೈಸಿ, ಆಶೀರ್ವದಿಸಿ, ನಿಮ್ಮೆಲ್ಲರ ಪ್ರೀತಿ ಅಭಿಮಾನಗಳಿಗೆ ನಾನು ಚಿರಋಣಿಯಾಗಿದ್ದೇನೆ.???? pic.twitter.com/Xycswv51zj— Dr Sudhakar K (@mla_sudhakar) June 26, 2020ಸಚಿವರ ಪತ್ನಿ ಹಾಗೂ ಮಗಳಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವರು ಹಾಗೂ ಇನ್ನಿಬ್ಬರು ಗಂಡು ಮಕ್ಕಳ ಟೆಸ್ಟ್ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಹೀಗಾಗಿ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಸಚಿವರ ಕುಟುಂಬಕ್ಕೆ ಕೊರೊನಾ ಒಕ್ಕರಿಸಿದೆ ಎಂದು ತಿಳಿದ ತಕ್ಷಣ ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.ವಿರೋಧ ಪಕ್ಷದ ನಾಯಕರಾದಂತ ಶ್ರೀ ಸಿದ್ದರಾಮಯ್ಯ ನವರು, ಡಾ ಪರಮೇಶ್ವರ ರವರು ,ಆರ್ ವಿ ದೇಶಪಾಂಡೆ,ಕೆ ಚ್ ಮುನಿಯಪ್ಪ ನವರು,hk ಪಾಟೀಲ್ ರವರು,ರಮೇಶಕುಮಾರ್ ರವರು ಹಾಗು ಅನೇಕ ಕಾಂಗ್ರೆಸ್ ನಾಯಕರು ಫೋನ್ ಮೂಲಕ ನನ್ನ ಕುಟುಂಬ ಸದಸ್ಯರ ಯೋಗಕ್ಷೇಮವನ್ನು ವಿಚರಿಸಿ ಆತ್ಮಸ್ಥ್ಯ್ರ್ಯ ವನ್ನು ತುಂಬಿದ್ದಾರೆ. ನಿಮಗೆಲ್ಲ ನನ್ನ ಕೃತಜ್ಞತೆಗಳು. pic.twitter.com/RSZO8PEe8V— Dr Sudhakar K (@mla_sudhakar) June 24, 2020Sign in to your account
Username or Email Address


Password

 Remember Me


