ಬೆಂಗಳೂರು: ಕೊರೊನಾ ಭಯದಿಂದ ಬೀದಿ ನಾಯಿಗಳಿಗೆ ಯುವ ಟೆಕ್ಕಿಯೊಬ್ಬ ಹಿಗ್ಗಾಮುಗ್ಗ ಥಳಿಸಿದ ಪ್ರಸಂಗವೊಂದು ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದೆ.ಸೀಲ್‍ಡೌನ್ ಪೊಲೀಸ್ ಸ್ಟೇಷನ್ ಮುಂದೆ ಓಡಾಡಿದ ನಾಯಿ ಏರಿಯಾಗೆ ಬಂತು ಅಂತ ಟೆಕ್ಕಿ ಹಿಗ್ಗಾಮುಗ್ಗ ಹೊಡೆದಿದ್ದಾನೆ. ಕಂಟೈನ್ಮೆಂಟ್ ಝೋನ್ ಗೆಲ್ಲ ಓಡಾಡಿ ನಮ್ ರೋಡ್ ಗೆ ಬರುತ್ತೆ ಅಂತ ತಡರಾತ್ರಿ ಮೂರು ಬೀದಿನಾಯಿಗಳಿಗೆ ದೊಣ್ಣೆಯಲ್ಲಿ ಥಳಿಸಿದ್ದಾನೆ.ಹನುಮಂತ ನಗರ ಸ್ಟೇಷನ್ ರೋಡ್ ಸೀಲ್ ಡೌನ್ ಆಗಿದೆ. ಹೀಗಾಗಿ ಅಲ್ಲೆಲ್ಲ ಓಡಾಡಿ ನಾಯಿ ನಮ್ ಏರಿಯಾಗೆ ಬರುತ್ತೆ ಅಂತ ಅಕ್ಕ-ಪಕ್ಕದ ಮನೆಯವರಿಗೆ ಹೇಳಿ ನಾಯಿಗೆ ಚೆನ್ನಾಗಿ ಬಾರಿಸಿದ್ದಾನೆ. ನಾಯಿಗಳು ಕೊರೊನಾ ಕ್ಯಾರಿ ಮಾಡಲ್ಲ ಅಂತ ಗೊತ್ತಿದ್ದರೂ ನಾಯಿಗೆ ಹೊಡೆದಿರುವುದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.ಯುವಕನ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.Sign in to your account
Username or Email Address


Password

 Remember Me


