ಬೆಂಗಳೂರು: ಮಹಾಮಾರಿ ಕೊರೊನಾ ಗಲ್ಲಿಗಲ್ಲಿಗೂ ಅಟಕಾಯಿಸಿಕೊಳ್ತಿದೆ. ಬೆಂಗಳೂರಿನಲ್ಲಿ ಕಾರ್ಪೊರೇಟರ್ ದೇಹಕ್ಕೂ ವೈರಸ್ ಹೊಕ್ಕಿದೆ.ಸಿದ್ದಾಪುರ ವಾರ್ಡ್ ಕಾರ್ಪೊರೇಟರ್ ಮುಜಾಯಿದ್ ಪಾಷಾಗೆ ಸೋಂಕು ಕಾಣಿಸಿಕೊಂಡಿದೆ. ಜ್ವರದಿಂದ ಬಳಲುತ್ತಿದ್ದ 39 ವರ್ಷದ ಕಾರ್ಪೊರೇಟರ್ ಮುಜಾಯಿದ್ ಪಾಷಾ ಕಂಟೈನ್ಮೆಂಟ್ ಝೋನ್‍ನಲ್ಲಿ ಓಡಾಡಿದ್ದರು.4 ದಿನಗಳಿಂದ ಪುಲಕೇಶಿನಗರದ ತಂಗಿ ಮನೆಯಲ್ಲಿ ವಾಸವಿದ್ದರು. ಕಳೆದ ಒಂದು ವಾರದಿಂದ ಜ್ವರ-ಶೀತದಿಂದ ಬಳಲುತ್ತಿದ್ದ ಕಾರ್ಪೊರೇಟರ್‍ಗೆ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ದೃಢಪಟ್ಟಿದೆ. ಸದ್ಯಕ್ಕೆ ಕಾರ್ಪೊರೇಟರ್ ಮನೆಯವರನ್ನ ಮತ್ತು ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್ ಮಾಡಲಾಗಿದೆ.4 ದಿನದ ಹಿಂದೆನೆ ಪಾಸಿಟಿವ್ ಅಂತ ಬಂದಿತ್ತು. ಸ್ವತಃ ಕಾರ್ಪೊರೇಟರ್ ಅವರೇ ಆರೋಗ್ಯಾಧಿಕಾರಿಗಳಿಗೆ ಯಾರಿಗೂ ಹೇಳಬೇಡಿ ಅಂದಿದ್ದಾರೆ. ಆದರೆ 4 ದಿನದ ಹಿಂದೆನೆ ಕಾರ್ಪೊರೇಟರ್ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರಂತೆ. ಹೀಗಾಗಿ ವಿಷಯವನ್ನು ಯಾರಿಗೂ ಹೇಳದೇ ಅಧಿಕಾರಿಗಳು ಮುಚ್ಚಿಟಿದ್ದರು. ಆದರೆ 4 ದಿನದ ಹಿಂದೆಯೇ ಆರೋಗ್ಯಾಧಿಕಾರಿಗಳು ಪ್ರೈಮರಿ ಕಾಂಟ್ಯಾಕ್ಟ್ ಅನ್ನು ಕ್ವಾರಂಟೈನ್ ಮಾಡಿದ್ದಾರೆ. ಕಾರ್ಪೊರೇಟರ್ ಪಕ್ಕದ ಮನೆಯವರಿಗೆ ಪಾಸಿಟಿವ್ ಬಂದಿತ್ತಂತೆ ಹೀಗಾಗಿ ಇವರಿಗೆ ಸೊಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ 4 ಜನ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.Sign in to your account
Username or Email Address


Password

 Remember Me


