ಬೆಂಗಳೂರು: ಇಂದು ಒಂದೇ ದಿನದ 442 ಮಂದಿಗೆ ಸೋಂಕು ದೃಢಪಟ್ಟಿದ್ದು ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,560ಕ್ಕೆ ಏರಿಕೆಯಾಗಿದೆ.ಇಂದು ಒಟ್ಟು 6 ಮಂದಿ ಮೃತಪಟ್ಟಿದ್ದು, ಒಟ್ಟು 519 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅತಿ ಹೆಚ್ಚು ಪ್ರಕರಣ ಎಂದಿನಂತೆ ಬೆಂಗಳೂರಿನಲ್ಲಿ ಕಂಡು ಬಂದಿದ್ದು 113 ಮಂದಿಗೆ ಸೋಂಕು ಬಂದಿದೆ. 81 ಅಂತರಾಜ್ಯ ಪ್ರಯಾಣಿಕರಿಗೆ ಸೋಂಕು ಬಂದಿದ್ದರೆ 23 ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸೋಂಕು ಬಂದಿದೆ.ಒಟ್ಟು ರಾಜ್ಯದಲ್ಲಿ 3,716 ಸಕ್ರಿಯ ಪ್ರಕರಣಗಳಿದ್ದು, ಆಸ್ಪತ್ರೆಯಿಂದ 6,670 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ಇಲ್ಲಿಯವರೆಗೆ 170 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಐಸಿಯುನಲ್ಲಿ 112 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ ಈಗ ಈ ಸಂಖ್ಯೆ 160ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲೇ 112 ಮಂದಿ ಐಸಿಯುನಲ್ಲಿದ್ದಾರೆ.ಎಲ್ಲಿ ಎಷ್ಟು?
ಬೆಂಗಳೂರು 113, ಕಲಬರುಗಿ 35, ರಾಮನಗರ 33, ದಕ್ಷಿಣ ಕನ್ನಡ 29, ಬಳ್ಳಾರಿ 26, ಧಾರವಾಡ 26, ಮೈಸೂರು 22, ಬಾಗಲಕೋಟೆ 18, ಕೊಡಗು 18, ಉಡುಪಿ 14, ಹಾಸನ 12, ಬೆಂಗಳೂರು ಗ್ರಾಮಾಂತರ 12, ಉತ್ತರ ಕನ್ನಡ 11, ವಿಜಯಪುರ 10,ಗದಗ 10, ಹಾವೇರಿ 10, ಮಂಡ್ಯ 9, ಬೀದರ್‌ 8, ದಾವಣಗೆರೆ 7, ಬೆಳಗಾವಿ 4, ಶಿವಮೊಗ್ಗ 4, ಕೋಲಾರ 4, ಯಾದಗಿರಿ 2, ಚಿಕ್ಕಬಳ್ಳಾಪುರ 2,ತುಮಕೂರು 1, ಚಿಕ್ಕಮಗಳೂರು 1, ಚಾಮರಾಜನಗರದಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.ಎಷ್ಟು ಮಂದಿ ಬಿಡುಗಡೆ?
ಇಂದು ಒಟ್ಟು 519 ಮಂದಿ ಬಿಡುಗಡೆಯಾಗಿದ್ದಾರೆ. ಯಾದಗಿರಿ 118, ದಕ್ಷಿಣ ಕನ್ನಡ 88, ಬಳ್ಳಾರಿ 49, ರಾಯಚೂರು 48, ಧಾರವಾಡ 43, ಉಡುಪಿ 33, ಕಲಬುರಗಿ 31, ಬೆಂಗಳೂರು 30, ಬೀದರ್‌ 18, ಹಾಸನ 17, ಮೈಸೂರು 15, ಉತ್ತರ ಕನ್ನಡ 10, ಬೆಳಗಾವಿ 6, ಶಿವಮೊಗ್ಗ 5, ಗದಗ 3, ಬೆಂಗಳೂರು ಗ್ರಾಮಾಂತರ 3, ಕೊಪ್ಪಳದಲ್ಲಿ ಇಬ್ಬರು ಬಿಡುಗಡೆಯಾಗಿದ್ದಾರೆ.Sign in to your account
Username or Email Address


Password

 Remember Me


