ಹುಬ್ಬಳ್ಳಿ: ನಗರದ ಇಬ್ಬರು ಮಹಿಳಾ ಹೋಮ್ ಗಾರ್ಡ್‍ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಮೂಲಗಳು ತಿಳಿದಿದ್ದು, ಈ ಮೂಲಕ ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ಪೊಲೀಸರಲ್ಲಿ ಆತಂಕ ಮನೆ ಮಾಡಿದೆ.ಕಳೆದ ವಾರ ಈ ಇಬ್ಬರು ಹೋಮ್ ಗಾರ್ಡ್‍ಗಳನ್ನು ಹೋಮ್ ಕ್ವಾರಂಟೈನಲ್ಲಿರಲು ಸೂಚಿಸಲಾಗಿತ್ತು. ಇದೀಗ ಸೋಂಕು ದೃಢಪಟ್ಟಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಮತ್ತೆ ಇಬ್ಬರು ಕೊರೋನಾ ವಾರಿಯರ್ಸ್‍ಗೆ ಕೊರೊನಾ ದೃಢಪಟ್ಟಂತಾಗಿದೆ.ಒಬ್ಬರು ಹಳೇಹುಬ್ಬಳ್ಳಿ ನಿವಾಸಿ, ಇನ್ನೊಬ್ಬರು ಗ್ರಾಮೀಣ ಪ್ರದೇಶದವರೆಂದು ಹೇಳಲಾಗಿದೆ. ಇವರು ಕೆಲಸ ಮಾಡುತ್ತಿರುವ ಠಾಣೆ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ. ಇವರಿಬ್ಬರನ್ನು ಇಂದು ರಾತ್ರಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಳೆಯ ಬುಲಿಟಿನ್ ನಲ್ಲಿ ಅಧಿಕೃತವಾಗಿ ಪ್ರಕಟವಾಗಲಿದೆ.Sign in to your account
Username or Email Address


Password

 Remember Me


