ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ 30 ವರ್ಷದ ಯುವಕ ಪರಾರಿಯಾಗಿ ಆತಂಕ ಮೂಡಿಸಿದ್ದಾನೆ.ಕಾವಲ್ ಭೈರಸಂದ್ರದವನಾಗಿರುವ ಯುವಕನಿಗೆ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಅಡ್ಮಿಟ್‌ ಮಾಡಲಾಗಿತ್ತು. ಮೂರನೇ ಮಹಡಿಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಗ್ಗೆ 10:30ಕ್ಕೆ ವೈದ್ಯರಿಗೆ, ಭದ್ರತಾ ಸಿಬ್ಬಂದಿಯ ಮುಖಕ್ಕೆ ಉಗಿದು ಪರಾರಿಯಾಗಿದ್ದಾನೆ.ವಿಕ್ಟೋರಿಯಾ ಆಸ್ಪತ್ರೆಯಿಂದ ಬಂದು ವಾಣಿ ವಿಲಾಸ ಆಸ್ಪತ್ರೆಯ ಕಾಂಪೌಂಡ್‌ ಹಾರಿ ಪರಾರಿಯಾಗಿದ್ದಾನೆ. ಸೋಂಕಿತನಿಗಾಗಿ ಪೊಲೀಸರು ಈಗ ಹುಡುಕಾಟ ಆರಂಭಿಸಿದ್ದಾರೆ.ವಿವಿ ಪುರಂ ಪೊಲೀಸರು ಪರಾರಿಯಾದ ಸೋಂಕಿತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆತ ಹಾಗೂ ಆತನ ಕುಟುಂಬಸ್ಥರ ಮೊಬೈಲ್ ಸಿಡಿಆರ್ ಮೂಲಕ ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ.Sign in to your account
Username or Email Address


Password

 Remember Me


