ಬೆಂಗಳೂರು: ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿಕ್ಕಪೇಟೆಯನ್ನು ಒಂದು ವಾರ ಬಂದ್ ಮಾಡಲಾಗುತ್ತಿದೆ. ವ್ಯಾಪಾರಿಗಳೇ ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುತ್ತಿದ್ದಾರೆ. ಚಿಕ್ಕಪೇಟೆಯ ವ್ಯಾಪ್ತಿಯಲ್ಲಿ 25 ಮಂದಿಗೆ ಕೊರೊನಾ ಸೋಂಕು ತಗುಲಿದೆ.ಚಿಕ್ಕಪೇಟೆಯಲ್ಲಿನ ಸುಮಾರು 8 ರಿಂದ 10 ವ್ಯಾಪಾರಿ ಸಂಘಗಳು ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಚಿಕ್ಕಪೇಟೆ ಮಾರುಕಟ್ಟೆ ನಾಳೆಯಿಂದ ಮುಂದಿನ ಭಾನುವಾರದವರೆಗೆ ಬಂದ್ ಮಾಡಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ.ಮಾರುಕಟ್ಟೆ ಬಂದ್ ಮಾಡಲು ಎಲೆಕ್ಟ್ರಿಕ್ ಮರ್ಚೆಂಟ್ ಅಸೋಸಿಯೇಷನ್, ಜ್ಯುವೆಲರಿ ಅಸೋಸಿಯೇಷನ್, ಸಿಲ್ವರ್ ಅಂಡ್ ಗೋಲ್ಡ್ ತಯಾರಕರು, ಸ್ವರ್ಣಕಾರ್ ಅಸೋಸಿಯೇಷನ್, ಜೆಮ್ಸ್ & ಪಲ್ರ್ಸ್ ಅಸೋಸಿಯೇಷನ್, ಸಿಲ್ಕ್ ಕ್ಲಾತ್ ಅಸೋಸಿಯೇಷನ್, ಸ್ವಿಚ್ ಗೇರ್ ಅಸೋಸಿಯೇಷನ್, ಹಾರ್ಡ್ ವೇರ್ ಅಸೋಸಿಯೇಷನ್ ಬೆಂಬಲ ನೀಡಿದ್ದಾರೆ.Sign in to your account
Username or Email Address


Password

 Remember Me


