ಬೆಂಗಳೂರು: ಅಮಾವಾಸ್ಯೆ ದಿನ ಭೀಕರ ಸಂಭವಿಸಿ ಮೂವರು ಯುವಕರು ಧಾರುಣ ಸಾವು ಕಂಡ ಘಟನೆ ಯಲಹಂಕದ ಜೆಕೆವಿಕೆ ಬಳಿ ಇಂದು ಬೆಳಗ್ಗೆ ನಡೆದಿದೆ.ಬೆಂಗಳೂರಿನ ನಿವಾಸಿಗಳಾದ ಮಹಮ್ಮದ್ ಆದಿ ಆಯಾನ್ (16), ಮಾಜ್ ಅಹಮ್ಮದ್ ಖಾನ್(17) ಹಾಗೂ ಸಯ್ಯದ್ ರಿಯಾಜ್ (22) ಮೃತ ದುರ್ದೈವಿಗಳು. ವ್ಹೀಲಿಂಗ್ ಮಾಡುವ ವೇಳೆ ಬೈಕ್ ಮುಖಾ ಮುಖಿ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.ಯುವಕರು ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿದ್ದರು. ಈ ವೇಳೆ ವೇಗವಾಗಿದ್ದ ಬೈಕ್ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಬೈಕ್ ಪೀಸ್ ಪೀಸ್ ಆಗಿದ್ದು, ತಲೆಗೆ ಅಪ್ಪಚ್ಚಿಯಾಗಿ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಯುವಕರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.Sign in to your account
Username or Email Address


Password

 Remember Me


