ಹಾಸನ: ಲಾಕ್‍ಡೌನ್‍ನಿಂದ ದುಡಿಮೆಯಿಲ್ಲದೆ ಮಗನಿಗೆ ಔಷಧಿ ಖರೀದಿಸೋದೇ ಕಷ್ಟ ಎಂದು ಪಬ್ಲಿಕ್ ಟಿವಿಗೆ ಕರೆ ಮಾಡಿ ಕಷ್ಟ ಹೇಳಿಕೊಂಡಿದ್ದ ಹಾಸನದ ಮಹಿಳೆಗೆ ಬಿಜೆಪಿ ಮುಖಂಡ ಹುಲ್ಲಹಳ್ಳಿ ಸುರೇಶ್ ಸಹಾಯ ಮಾಡಿದ್ದಾರೆ.ಪಬ್ಲಿಕ್ ಟಿವಿ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ಮಹಿಳೆ ತನ್ನ ಪತಿ ಆರ್‍ಎಂಸಿ ಯಾರ್ಡಿನಲ್ಲಿ ಮೂಟೆ ಹೊರುವ ಕೆಲಸ ಮಾಡುತ್ತಿದ್ದಾರೆ. ಆದರೆ ಲಾಕ್‍ಡೌನ್ ನಿಂದ ಸರಿಯಾಗಿ ಕೂಲಿ ಸಿಗದೆ ಜೀವನೆ ನಿರ್ವಹಣೆ ಕಷ್ಟವಾಗಿದ್ದು, ಮಗನ ಔಷಧಿಗೆ ಹಣವಿಲ್ಲ ಎಂದು ಕಷ್ಟ ಹೇಳಿಕೊಂಡು ಸಹಾಯಕ್ಕೆ ಮನವಿ ಮಾಡಿದ್ರು.ಇದನ್ನು ಗಮನಿಸಿದ್ದ ಹಾಸನ ಬಿಜೆಪಿ ಮುಖಂಡ ಹುಲ್ಲಹಳ್ಳಿ ಸುರೇಶ್ ತಾವೇ ಸ್ವತಃ ತೆರಳಿ, ಒಂದು ತಿಂಗಳಿಗೆ ಆಗುವಷ್ಟು ಔಷಧಿ ಖರೀದಿಸಿ ಮಹಿಳೆಗೆ ತಲುಪಿಸುವ ವ್ಯವಸ್ಥೆ ಮಾಡಿ ಸಹಾಯ ಮಾಡಿದ್ದಾರೆ.Sign in to your account
Username or Email Address


Password

 Remember Me


