ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರನಾಯಕ ಹಾಗೂ ಸಂಸದ ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ಪ್ರಯುಕ್ತ ‘ಗೋ ಗ್ರೀನ್ ಗಾಂಧಿನಗರ’ ಅಭಿಯಾನವನ್ನು ಆರ್.ಗುಂಡೂರಾವ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.ಗಾಂಧಿನಗರದ ಶೇಷಾದ್ರಿಪುರಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಗಿಡಗಳನ್ನು ನೆಡುವ ಮೂಲಕ ‘ಗೋ ಗ್ರೀನ್ ಗಾಂಧಿನಗರ’ ಅಭಿಯಾನಕ್ಕೆ ಚಾಲನೆ ನೀಡಿದರು.ಗಾಂಧಿನಗರ ಕ್ಷೇತ್ರದ ಏಳು ವಾರ್ಡ್‌ಗಳಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಈ ಅಭಿಯಾನದಲ್ಲಿ ನೆಡಲಾಗುತ್ತಿದೆ. ಹೊಂಗೆ, ಬೇವು, ಸಂಪಿಗೆ, ನೇರಳೆ ಮತ್ತು ಕಾಡು ಬಾದಾಮಿ ಮಾದರಿಯ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಇದೇ ವೇಳೆ ಹುತಾತ್ಮರಾದ ಅಮರ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಾಸಕ ದಿನೇಶ್ ಗುಂಡೂರಾವ್ ಅವರ ಮಗಳು ಅನನ್ಯ ಗುಂಡೂರಾವ್, ಬಿಬಿಎಂಪಿ ಸದಸ್ಯೆ ಶ್ರೀಮತಿ ಲತಾ ನವೀನ್ ಕುಮಾರ್, ಕಾಂಗ್ರೆಸ್ ಮುಖಂಡ ನವೀನ್ ಕುಮಾರ್, ರಘುನಾಥ್ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.Sign in to your account
Username or Email Address


Password

 Remember Me


