ಬೆಂಗಳೂರು: ನ್ಯಾಯ ಪಂಚಾಯ್ತಿಗೆ ಕರೆದು ಜಿಮ್ ಟ್ರೈನರ್‍ನನ್ನು ಬರ್ಬರ ಹತ್ಯೆಗೈದ ಘಟನೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಬಳಿಯ ರಾಮಸಂದ್ರದಲ್ಲಿ ನಡೆದಿದೆ.ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ನಿವಾಸಿ ಕಿರಣ್ ಅಲಿಯಾಸ್ ಪುಟ್ಟ (27) ಕೊಲೆಯಾದ ವ್ಯಕ್ತಿ ಜಿಮ್ ಟ್ರೈನರ್. ಕಿರಣ್ ರಾಮಸಂದ್ರದಲ್ಲಿ ಜಿಮ್ ಟ್ರೈನರ್ ಆಗಿದ್ದ.ಪ್ರೇಮಿಗಳಿಬ್ಬರ ವಿಚಾರದಲ್ಲಿ ಕಿರಿಕ್ ಉಂಟಾಗಿತ್ತು. ಇತ್ತ ಕಲ್ಕೆರೆ ಭಾಗದ ಯುವಕರ ಗುಂಪೊಂದು ಕಿರಣ್ ಹತ್ಯೆಗೆ ಪ್ಲಾನ್ ನಡೆಸಿತ್ತು. ಇದೇ ಸಂದರ್ಭದಲ್ಲಿ ಪ್ರೇಮಿಗಳು ಆ ಗುಂಪಿನವರ ಮೊರೆ ಹೋಗಿದ್ದರು. ಹೀಗಾಗಿ ಪ್ರೇಮಿಗಳ ಜಗಳ ಬಗೆ ಹರಿಸಬೇಕು ನೀನು ಬಾ ಎಂದು ದುಷ್ಕರ್ಮಿಗಳು ಕಿರಣ್‍ನನ್ನು ಕರೆದಿದ್ದರು.ಕಿರಣ್ ಇಂದು ನ್ಯಾಯ ಪಂಚಾಯ್ತಿಗೆ ಹೋಗಿದ್ದಾಗ ಮಾತಿಗೆ ಮಾತು ಬೆಳೆದೆ. ಇದರಿಂದ ಕೋಪಗೊಂಡ ಗುಂಪು ಕಿರಣ್ ಮೇಲೆ ಲಾಗು ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಪ್ರೇಮಿಗಳನ್ನು ವಶಕ್ಕೆ ಪಡೆದು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.Sign in to your account
Username or Email Address


Password

 Remember Me


