ಉಡುಪಿ: ಪಬ್ಲಿಕ್ ಹೀರೋ, ಸಮಾಜ ಸೇವಕ ನಿತ್ಯಾನಂದ ಒಳಕಾಡು ಬೃಹತ್ ಮಾಸ್ಕ್ ತಯಾರು ಮಾಡಿ ಜನಜಾಗೃತಿ ಮೂಡಿಸಿದ್ದಾರೆ. ಈ ಮೂಲಕ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ವಿಶಿಷ್ಟ ರೀತಿಯ ಮಾಸ್ಕ್ ಡೇ ಆಚರಿಸಲಾಯ್ತು.ಚಿತ್ತರಂಜನ್ ಸರ್ಕಲ್ ನಲ್ಲಿ 6 ಅಡಿ ಅಗಲ, 5 ಅಡಿ ಉದ್ದ ಮಾಸ್ಕ್ ಅನಾವರಣ ನಡೆಸಲಾಯ್ತು. ಉಡುಪಿ ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡ ದೊಡ್ಡ ಮಾಸ್ಕ್ ಅನಾವರಣ ಮಾಡಿದರು. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಪ್ರದರ್ಶನ ನಡೆಸಲಿರುವ ನಿತ್ಯಾನಂದ ಒಳಕಾಡು, ಮಾಸ್ಕ್ ಧರಿಸುವ ಬಗ್ಗೆ ಸ್ಯಾನಿಟೈಸರ್ ಉಪಯೋಗದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿತ್ಯಾನಂದ ಒಳಕಾಡು, ಸಮಿತಿ ಕಡೆಯಿಂದ ಲಾಕ್ ಡೌನ್ ಸಂದರ್ಭದಲ್ಲಿ ನಿರಂತರ ಸೇವೆ ನಡೆದಿದೆ. ಆಹಾರ ಬಟ್ಟೆ, ಶೇವಿಂಗ್ ಕಿಟ್ ವಿತರಣೆ ಮಾಡಿದ್ದೇವೆ. ಇದೀಗ ಮಾಸ್ಕ್ ಸ್ಯಾನಿಟೈಸರ್ ಬಗ್ಗೆ ಜನಜಾಗೃತಿ ಮಾಡುತ್ತಿದ್ದೇವೆ. ಸರ್ಕಾರ, ಆರೋಗ್ಯ ಇಲಾಖೆ ನಿಯಮಗಳನ್ನು ಪಾಲಿಸಬೇಕು ಎಂದು ವಿನಂತಿ ಮಾಡಿದರು.


 Advertisement 







 Advertisement 




Sign in to your account
Username or Email Address


Password

 Remember Me


