ಬೆಂಗಳೂರು: ರಾಜ್ಯಸಭೆ ಬೆನ್ನಲ್ಲೇ ವಿಧಾನ ಪರಿಷತ್ ಚುನಾವಣೆ ರಂಗೇರುತ್ತಿದ್ದು, ಸದ್ಯ ಕಾಂಗ್ರೆಸ್ ತನ್ನ ಇಬ್ಬರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಕಾಂಗ್ರೆಸ್ ಹೈಕಮಾಂಡ್ ವಿಧಾನ ಪರಿಷತ್ ಚುನಾವಣೆಗೆ ನಸೀರ್ ಅಹ್ಮದ್ ಹಾಗೂ ಹರಿಪ್ರಸಾದ್ ಅವರ ಹೆಸರನ್ನು ಅಮತಿಮಗೊಳಿಸಿದೆ. ನಸೀರ್ ಅಹ್ಮದ್ ಅವರು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭ್ಯರ್ಥಿಯಾಗಿದ್ದರೆ, ಹರಿಪ್ರಸಾದ್ ಹೈ ಕಮಾಂಡ್ ಕ್ಯಾಂಡಿಡೇಟ್ ಎನ್ನಲಾಗಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಿವೇದಿತ್ ಆಳ್ವ ಪರವಾಗಿ ಲಾಭಿಮಾಡಿದ್ದರು. ಆದರೆ ಸಿದ್ದರಾಮಯ್ಯ ಅವರ ಬಣ್ಣವು ಕೆಪಿಸಿಸಿ ಅಧ್ಯಕ್ಷರಿಗೆ ಟಕ್ಕರ್ ಕೊಟ್ಟು ತಮ್ಮ ಅಭ್ಯರ್ಥಿಗೆ ಟಿಕೆಟ್ ಸಿಗುವಂತೆ ಮಾಡಿದೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಪ್ರಯತ್ನದಲ್ಲೇ ಡಿಕೆ ಶಿವಕುಮಾರ್ ಅವರಿಗೆ ಹಿನ್ನಡೆ ಅನುಭವಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಒಟ್ಟು 7 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿಗೆ 4, ಕಾಂಗ್ರೆಸ್‍ಗೆ 2 ಹಾಗೂ ಜೆಡಿಎಸ್ ಪಕ್ಷಕ್ಕೆ 1 ಸ್ಥಾನಕ್ಕೆ ಸ್ಪರ್ಧೆ ಇರಲಿದೆ. ಗುರುವಾರ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೇ ದಿನ ಆಗಿದೆ.Sign in to your account
Username or Email Address


Password

 Remember Me


