ಹಾವೇರಿ: ಮಗುವನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಯಲ್ಲಿ ಬಿಟ್ಟು ನೀರು ಮುಟ್ಟಿಸಿ ಹರಕೆ ತೀರಿಸುವ ವಿಚಿತ್ರ ಹಾಗೂ ಅಪಾಯಕಾರಿ ಪದ್ಧತಿಯನ್ನು ದರ್ಗಾದಲ್ಲಿ ಅನುಸರಿಸಲಾಗುತ್ತಿದೆ.ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ಹಜರತ್ ಫೀರ್ ಸಯ್ಯದ್ ಅಲ್ಲಾವುದ್ದೀನ್ ಶಾ ಖಾದ್ರಿ ದರ್ಗಾದಲ್ಲಿ ಇಂಥದ್ದೊಂದು ಪದ್ಧತಿ ಜೀವಂತವಾಗಿದ್ದು, ಜನ ಮಗುವಿನ ಜೀವವನ್ನೂ ಲೆಕ್ಕಿಸದೆ ತೊಟ್ಟಿಲೊಳಗೆ ಮಲಗಿಸಿ ಕಟ್ಟಿ, ಬಾವಿಯಲ್ಲಿನ ನೀರು ಮುಟ್ಟಿಸುತ್ತಾರೆ.ಎರಡು ದಿನಗಳ ಹಿಂದೆ ನಡೆದ ಘಟನೆಯ ದೃಶ್ಯಗಳು ಈಗ ವೈರಲ್ ಆಗಿವೆ. ಮಕ್ಕಳಾಗದವರು ದರ್ಗಾಕ್ಕೆ ಹರಕೆ ಹೊತ್ತು, ಮಕ್ಕಳಾದ ನಂತರ ಕೆಲವೇ ತಿಂಗಳ ಮಗುವನ್ನು ದರ್ಗಾಗೆ ಕರೆತಂದು ದರ್ಗಾದಲ್ಲಿರೋ ಬಾವಿಯ ನೀರು ಮುಟ್ಟಿಸುತ್ತಾರೆ. ಮಗುವನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಯಲ್ಲಿ ಬಿಡುವಾಗ ಸ್ವಲ್ಪ ಯಾಮಾರಿದರೂ ನೀರಿಗೆ ಬೀಳುತ್ತದೆ. ಇಷ್ಟೆಲ್ಲ ತಿಳಿದಿದ್ದರೂ ಜನ ಈ ಮೂಢನಂಬಿಕೆಯ ಆಚರಣೆಯನ್ನು ಮಾಡುತ್ತಾರೆ.ಹರಕೆ ತೀರಿಸುವ ನೆಪದಲ್ಲಿ ಈ ರೀತಿಯ ಅಪಾಯಕಾರಿ, ವಿಚಿತ್ರ ಪದ್ಧತಿಯನ್ನು ದರ್ಗಾದಲ್ಲಿ ಇನ್ನೂ ಆಚರಿಸಲಾಗುತ್ತಿದೆ. ಹಲವು ವರ್ಷಗಳಿಂದ ಈ ಪದ್ಧತಿ ದರ್ಗಾದಲ್ಲಿ ನಡೆದುಕೊಂಡು ಬಂದಿದ್ದರೂ ತಾಲೂಕು ಮತ್ತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಈ ಘಟನೆ ಕುರಿತು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.Sign in to your account
Username or Email Address


Password

 Remember Me


