ಕೊಪ್ಪಳ: ಚೀನಾದವರು ಭಾರತದ ಜೊತೆ ಸಂಘರ್ಷಕ್ಕೆ ಬಂದ್ರೆ ಒದೆ ತಿಂದು ಹೋಗ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ರು.ಇಂದು ಕೊಪ್ಪಳದಲ್ಲಿ ಮಾತನಾಡಿದ ಈಶ್ವರಪ್ಪ, ಚೀನಾ ನಮ್ಮ ಜೊತೆ ಆಟ ಆಡ್ತಿದೆ. ಇದೇ ರೀತಿ ಮುಂದುವರಿದರೆ ಒದೆ ತಿಂದು ಹೋಗ್ತಾರೆ. ಈಗಾಗಲೇ ಭಾರತೀಯ ಸೇನೆ ಪಾಕಿಸ್ತಾನದ ಮಗ್ಗಲು ಮುರಿದಿದೆ. ಅದರಂತೆ ಚೀನಾಕ್ಕು ಮುರಿಯಬೇಕಾಗುತ್ತೆ ಎಂದರು.ಕೇಂದ್ರದ ಮೋದಿ ಸರ್ಕಾರ ಭಾರತೀಯ ಸೇನೆಗೆ ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳು ಪೂರೈಸಿದೆ. ಪ್ರತಿಯೊಬ್ಬ ಸೈನಿಕರಿಗೂ ಸ್ವಾತಂತ್ರ್ಯ ನೀಡಿದೆ. ಈ ಹಿಂದೆ ವಿರೋಧಿಗಳು ಹಲ್ಲೆ ನಡೆಸಿದರೆ, ಸೈನಿಕರು ಸತ್ತು ಹೋದ್ರೆ ವಾಪಸ್ ಹೊಡೆಯೋಕೆ ಆದೇಶ ಕೇಳಬೇಕಿತ್ತು. ಆದೇಶಕ್ಕಾಗಿ ಕಾಯಬೇಕಿತ್ತು. ಆದರೆ ಮೋದಿ ಸರ್ಕಾರ ಸೈನಿಕರಿಗೆ ಸ್ವತಂತ್ರ ನೀಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ತಂಟೆಕೋರ ಚೀನಾಗೆ ತಕ್ಕ ಉತ್ತರ – ಐವರು ಚೀನಿ ಸೈನಿಕರ ಹತ್ಯೆಇಡೀ ದೇಶ ಭಾರತ ಸೈನಿಕರ ಜೊತೆ ಇದ್ದಾರೆ. ಚೀನಾ ಕುತಂತ್ರಕ್ಕೆ ನಮ್ಮ ಸೈನಿಕರು ತಕ್ಕ ಉತ್ತರ ನೀಡಲಿದ್ದಾರೆ. ಮೋದಿ ಬಂದ ಮೇಲೆ ಇಡೀ ಪ್ರಪಂಚ ಮೋದಿ ಜೊತೆಗಿದೆ. ಪಾಕಿಸ್ತಾನ ಹಾಗೂ ಚೀನಾ ಕಾಲು ಕೆರೆದು ಯುದ್ದಕ್ಕೆ ಬಂದ್ರೆ ಇಡೀ ಪ್ರಪಂಚ ನಮ್ಮ ಜೊತೆಗಿರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.Sign in to your account
Username or Email Address


Password

 Remember Me


