ಶಿವಮೊಗ್ಗ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ಭೇಟಿ ನೀಡಿದ ಕಳ್ಳರು, ಮನೆಯಲ್ಲಿದ್ದ ವ್ಯಕ್ತಿ ಹೆದರಿಸಿ 2.30 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.ಜಿಲ್ಲೆ ಸಾಗರ ತಾಲೂಕಿನ ಜನ್ನೆಹಕ್ಲು ಗ್ರಾಮದಲ್ಲಿ ಜೂನ್ 12 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆದಾಯ ತೆರಿಗೆ ಅಧಿಕಾರಿಗಳ ರೀತಿ ದಾಳಿ ನಡೆಸಿದ ಮೂವರು ಖದೀಮರು, ಖಡಕ್ಕಾಗಿ ಐಟಿ ಅಧಿಕಾರಿಗಳ ರೀತಿಯಲ್ಲೇ ಪ್ರಶ್ನಿಸಿ, ಯಾವುದೇ ಅನುಮಾನ ಬಾರದಂತೆ ನಡೆದುಕೊಂಡಿದ್ದಾರೆ. ಬೆಳಗ್ಗೆ 6 ಗಂಟೆಗೆ ಮನೆಗೆ ಭೇಟಿ ನೀಡಿದ್ದ, ನಕಲಿ ಅಧಿಕಾರಿಗಳು, ಮನೆಯ ಮಾಲೀಕ ವಿಶ್ವನಾಥ್ ರಿಂದ 2.30 ಲಕ್ಷ ರೂ. ನಗದು, ಖಾಲಿ ಚೆಕ್ ಹಾಗೂ ಖಾಲಿ ಪೇಪರ್‍ಗೆ ಸಹಿ ಪಡೆದುಕೊಂಡು ಹೋಗಿದ್ದಾರೆ.ಸದ್ಯಕ್ಕೆ ಇಷ್ಟು ಸಾಕು, 15 ದಿನ ಬಿಟ್ಟು ಮತ್ತೆ ಬರುವುದಾಗಿ ಹೇಳಿ ಕಾರು ಹತ್ತಿ ಹೊರಟಿದ್ದಾರೆ. ಆಂಡ್ರಾಯ್ಡ್ ಡೆವಲಪವರ್ ಕೆಲಸ ಮಾಡಿಕೊಂಡಿರುವ ವಿಶ್ವನಾಥ್, ಭಯದಿಂದ ನಕಲಿ ಅಧಿಕಾರಿಗಳಿಗೆ ಹಣ ಹಾಗೂ ಮಾಹಿತಿ ನೀಡಿದ್ದಾರೆ. ಕಾರಿನ ನಂಬರ್ ಬರೆದುಕೊಂಡಿದ್ದ ವಿಶ್ವನಾಥ್, ನಂತರ ಅನುಮಾನಗೊಂಡು ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ವಿಶ್ವನಾಥ್ ನೀಡಿದ ದೂರನ್ನು ದಾಖಲಿಸಿಕೊಂಡು ಪೊಲೀಸರು ನಕಲಿ ಅಧಿಕಾರಿಗಳ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ.Sign in to your account
Username or Email Address


Password

 Remember Me


