ಕಾರವಾರ: ರಾತ್ರಿ ವೇಳೆ ಪ್ರಾಣಿ ಬೇಟೆಗೆಂದು ಐವರು ಗೆಳೆಯರು ಕಾಡಿಗೆ ಹೋಗಿದ್ದಾರೆ. ಈ ವೇಳೆ ಕಾಡು ಪ್ರಾಣಿ ಎಂದು ತಮ್ಮ ತಂಡದಲ್ಲಿದ್ದ ಗೆಳೆಯನಿಗೇ ಗುಂಡುಹಾರಿಸಿದ ಘಟನೆ ನಡೆದಿದೆ.ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಘಟನೆ ನಡೆದಿದ್ದು, ಬೇಟೆಗಾಗಿ ಹೋಗಿದ್ದ ಸುಲೇಮಾನ್, ಇಸ್ಮಾಯಿಲ್, ಮುಕಮುಲ್, ಅಹ್ಮದ್ ಹಾಗೂ ಬೇಟೆಗೆ ಬಳಸಿದ ಬಂದೂಕನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಭಾನುವಾರ ರಾತ್ರಿ ಮಳಗಿ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ಐವರು ತೆರಳಿದ್ದರು. ಈ ವೇಳೆ ಪ್ರಾಣಿಗಳನ್ನು ಬೇಟೆಯಾಡಲು ಗುಂಪಿನಲ್ಲಿದ್ದವರು ಚದುರಿ ಹೋಗಿದ್ದರು. ಆಗ ಮುಸ್ತಾಕ್ ಎಂಬಾತ ತಂಡದಿಂದ ಬೇರ್ಪಟ್ಟು ಪ್ರಾಣಿಗಳನ್ನು ಹುಡುಕುತಿದ್ದ. ಈ ವೇಳೆ ಈತನೇ ಕಾಡುಪ್ರಾಣಿ ಎಂದು ಗುಂಡು ಹಾರಿಸಿದ್ದಾರೆ. ಮುಸ್ತಾಕ್‍ಗೆ ಎದೆಯ ಮೇಲ್ಭಾಗ ಗಂಭೀರ ಗಾಯವಾಗಿದ್ದು, ತಕ್ಷಣ ಹುಬ್ಬಳ್ಳಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


