ಬೆಂಗಳೂರು: ಲಾಕ್‍ಡೌನ್ ಮಧ್ಯೆಯೇ ವಿವಾಹವಾಗಿರುವ ನಟ ನಿಖಿಲ್ ಕುಮಾರಸ್ವಾಮಿ ತಮ್ಮ ಪತ್ನಿ ಜೊತೆ ಕಾಲ ಕಳೆಯುತ್ತಿದ್ದು, ಚಿತ್ರೀಕರಣ ಸಹ ನಿಂತಿರುವುದರಿಂದ ಮನೆಯಲ್ಲೇ ಕಾಲ ಕಳೆಯಲು ಇದು ವರದಾನವಾಗಿದೆ. ಹೀಗಾಗಿ ತಮ್ಮ ಪತ್ನಿ ಜೊತೆ ಕ್ವಾಲಿಟಿ ಟೈನ್ ಕಳೆಯುತ್ತಿರೋ ನಿಖಿಲ್, ಈ ಕುರಿತ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಡೇಟ್ ಮಾಡುತ್ತಿದ್ದಾರೆ.ಇತ್ತೀಚೆಗೆ ತಮ್ಮ ಮಡದಿಯೊಂದಿಗೆ ಬಿಡದಿಯ ತೋಟದ ಮನೆಯ ಬಳಿ ಸಂಚರಿಸುತ್ತಿದ್ದ ಫೋಟೋ ಅಪ್‍ಡೇಟ್ ಮಾಡಿದ್ದರು. ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಾಕಿ ಇವತ್ತಿನ ದಿನ ಬಿಡದಿಯ ತೋಟದ ಮನೆಯ ಆವರಣದಲ್ಲಿ ಕಳೆದ ಸುಂದರ ಕ್ಷಣಗಳು ಎಂಬ ಸಾಲುಗಳನ್ನು ಬರೆದಿದ್ದರು. ಅಲ್ಲದೆ ವಿವಾಹ ನಿಶ್ಚಯವಾದ ನಂತರ ಬೆಂಗಳೂರಿನ ರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಿದ ಫೋಟೋ ಹಂಚಿಕೊಂಡಿದ್ದರು.ಹೀಗೆ ಸಿನಿಮಾ ಅಪ್‍ಡೇಟ್‍ಗಳಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ಕುರಿತು ಅಭಿಮಾನಿಗಳಿಗೆ ಹೆಚ್ಚು ಅಪ್‍ಡೇಟ್ ನೀಡುತ್ತಿದ್ದಾರೆ. ಲಾಕ್‍ಡೌನ್ ವೇಳೆ ಸಿಂಪಲ್ ಆಗಿ ವಿವಾಹವಾದ ನಿಖಿಲ್, ನಂತರ ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಆದರೆ ಇದೀಗ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಇದೀಗ ಮಳೆಯಲ್ಲಿ ನೀಲಿ ಬಣ್ಣದ ಛತ್ರಿ ಕೆಳಗೆ ಇಬ್ಬರೂ ನಿಂತಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಯಾವುದೋ ಮನೆಯ ಪಕ್ಕದಲ್ಲಿ ನಿಂತಿದ್ದು, ನಿಖಿಲ್ ಮುಂದೆ ನಿಂತರೆ ಪತ್ನಿ ರೇವತಿ ಹಿಂದೆ ಒಂದು ಕೈಯಲ್ಲಿ ಛತ್ರಿ ಹಿಡಿದು, ಮತ್ತೊಂದು ಕೈಯನ್ನು ನಿಖಿಲ್ ಹೆಗಲ ಮೇಲೆ ಹಾಕಿದ್ದಾರೆ. ಆದರೆ ಕೇವಲ ಫೋಟೋ ಮಾತ್ರ ಹಾಕಿದ್ದು, ಎಲ್ಲಿ, ಯಾವ ಸಂದರ್ಭ ಎಂಬ ಕುರಿತು ಬರೆದಿಲ್ಲ.  ♥️A post shared by  Nikhil Kumar (@nikhilgowda_jaguar) on Jun 13, 2020 at 7:19am PDTಲಾಕ್‍ಡೌನ್ ನಡುವೆಯೂ ಕುಮಾರಸ್ವಾಮಿ ಪುತ್ರ ನಿಖಿಲ್ ಏಪ್ರಿಲ್ 17ರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್.ಡಿ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ನಟ ನಿಖಿಲ್, ರೇವತಿ ಅವರ ಜೊತೆ ಸಪ್ತಪದಿ ತುಳಿದಿದ್ದರು. ಇಷ್ಟು ಮಾತ್ರವಲ್ಲದೆ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಿದ್ದ ಸಿನಿಮಾ ಕಾರ್ಮಿಕರಿಗೆ ನಿಖಿಲ್ ಸಹಾಯ ಮಾಡಿದ್ದು, ಬಡವರ ಖಾತೆಗೆ ಹಣ ಹಾಕುವ ಮೂಲಕ ನೆರವಾಗಿದ್ದಾರೆ. ಈಗಾಗಲೇ ಎರಡ್ಮೂರು ಚಿತ್ರಗಳಿಗೆ ನಿಖಿಲ್ ಸಹಿ ಹಾಕಿದ್ದು, ಇನ್ನೂ ಸೆಟ್ಟೇರಿಲ್ಲ. ಇನ್ನೇನು ಸಿನಿಮಾ ಕೆಲಸಗಳು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಪತ್ನಿಯೊಂದಿಗೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.Sign in to your account
Username or Email Address


Password

 Remember Me


