ಚಿಕ್ಕಮಗಳೂರು: 10 ರೂ.ಯ ಸಿಗರೇಟ್ ಜೊತೆ ಅಂಗಡಿಯಲ್ಲಿದ್ದ ಮೊಬೈಲ್ ಕದ್ದು ಕಳ್ಳನೊಬ್ಬ ಎಸ್ಪೇಕ್ ಅಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ-ಬಣಕಲ್ ಸಮೀಪದ ಸಬ್ಬೇನಹಳ್ಳಿಯಲ್ಲಿ ನಡೆದಿದೆ.ಅಂಗಡಿಗೆ ಬಂದ ವ್ಯಕ್ತಿ 20 ರೂಪಾಯಿ ನೀಡಿ ಸಿಗರೇಟ್ ಕೇಳಿದ್ದಾನೆ. ಅಂಗಡಿಯಲ್ಲಿದ್ದ ವ್ಯಕ್ತಿ ಸಿಗರೇಟ್ ನೀಡಿ ಚಿಲ್ಲರೆ 10 ರೂಪಾಯಿ ವಾಪಸ್ ನೀಡಿ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ. ಸಿಗರೇಟ್ ಪಡೆದ ವ್ಯಕ್ತಿ ಅಲ್ಲಿಯೇ ಅದಕ್ಕೆ ಬೆಂಕಿ ಹಚ್ಚಿ ಒಂದು ಧಮ್ ಎಳೆದಿದ್ದಾನೆ. ಅಂಗಡಿಯಾತ ಕೆಲಸದಲ್ಲಿ ತೊಡಗಿರೋದನ್ನ ಕಂಡು ನಿಧಾನವಾಗಿ ಕೌಂಟರ್ ಮೇಲಿರಿಸಲಾಗಿದ್ದ ಮೊಬೈಲ್ ಜೊತೆ ಜೂಟ್ ಆಗಿದ್ದಾನೆ.ಕೆಲ ಸಮಯದ ಬಳಿಕ ಅಂಗಡಿ ಮಾಲೀಕ ಮೊಬೈಲ್ ಹುಡುಕಿದಾಗ ಸಿಕ್ಕಿಲ್ಲ. ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಕಳ್ಳನ ಕೈಚಳಕ ಬಯಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.Sign in to your account
Username or Email Address


Password

 Remember Me


