ಮಂಗಳೂರು: ಶಿವನ ವಿಗ್ರಹದ ಪೀಠದ ಮೇಲೆ ಟಿಕ್‍ಟಾಕ್ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಂಚಿನಡ್ಕ ಗ್ರಾಮದಲ್ಲಿ ನಡೆದಿದೆ. ಬಂಧಿತರನ್ನು ಸಜೀಪ ನಿವಾಸಿಗಳಾದ ಮಸೂದ್, ಅಜೀಮ್, ಅಬ್ದುಲ್ ಲತೀಫ್ ಹಾಗೂ ಅರ್ಫಾಜ್ ಎಂದು ಗುರುತಿಸಲಾಗಿದೆ. ಈ ನಾಲ್ವರು ಕಂಚಿನಡ್ಕ ಹಿಂದೂ ರುದ್ರಭೂಮಿಯಲ್ಲಿ ಟಿಕ್‍ಟಾಕ್ ಮಾಡಿದ್ದರು.ಆರೋಪಿಗಳು ಕಂಚಿನಡ್ಕದ ರುದ್ರಭೂಮಿಯ ಶಿವನ ವಿಗ್ರಹದ ಪೀಠದ ಮೇಲೆ ಶೂ ಧರಿಸಿ ಟಿಕ್‍ಟಾಕ್ ಮಾಡಿದ್ದರು. ಇದನ್ನು ನೋಡಿದ ರುದ್ರಭೂಮಿ ಅಧ್ಯಕ್ಷ ಹಿಂದು ಧಾರ್ಮಿಕ ಶೃದ್ಧಾ ಕೇಂದ್ರಕ್ಕೆ ಧಕ್ಕೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈಗ ವಿಡಿಯೋ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.Sign in to your account
Username or Email Address


Password

 Remember Me


