ಹಾಸನ: ಜೈನ ಮಠದ ಆವರಣದಲ್ಲಿ ಎರಡು ಚಿರತೆಗಳು ರಾಜಾರೋಷವಾಗಿ ಓಡಾಡಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಎರಡು ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆಗಳ ಸಂಚಾರ ಸಿಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ. ಜೂನ್ 9ರಂದು ಮಧ್ಯರಾತ್ರಿ 2.40ರ ಸುಮಾರಿಗೆ ಚಿರತೆಗಳು ಮಠದ ಆವರಣದಲ್ಲಿ ಓಡಾಟ ನಡೆಸಿವೆ.ಒಟ್ಟೊಟ್ಟಿಗೆ ಎರಡು ಚಿರತೆಗಳ ಓಡಾಟದಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕೆಲ ತಿಂಗಳ ಹಿಂದೆ ಕೂಡ ಇದೇ ಏರಿಯಾದಲ್ಲಿ ಚಿರತೆ ಕಾಣಿಸಿಕೊಂಡಿದ್ದವು. ಇದೀಗ ಮತ್ತೆ ಎರಡು ಚಿರತೆಗಳು ಕಾಣಿಸಿಕೊಂಡಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಅರಣ್ಯ ಇಲಾಖೆಯವರು ಚಿರತೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.Sign in to your account
Username or Email Address


Password

 Remember Me


