ಬೆಂಗಳೂರು: ‘ಬಿಗ್‍ಬಾಸ್ ಕನ್ನಡ ಸೀಸನ್ 6’ ಸ್ಪರ್ಧಿ ಧನರಾಜ್ ತಂದೆಯಾಗುವ ಸಂತಸದಲ್ಲಿದ್ದಾರೆ. ಇತ್ತೀಚೆಗೆ ಧನರಾಜ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಪತ್ನಿ ಶಾಲಿನಿಗೆ ಸೀಮಂತ ಕಾರ್ಯ ನಡೆದಿದೆ.ಧನರಾಜ್ ತಾವು ತಂದೆಯಾಗುತ್ತಿರುವ ವಿಚಾರವನ್ನು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ನಟಿ ಕವಿತಾ ಗೌಡ ಧನರಾಜ್ ಪತ್ನಿಯ ಸೀಮಂತ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಧನರಾಜ್ ತಂದೆಯಾಗುವ ಖುಷಿಯಲ್ಲಿದ್ದಾರೆ.ಬೆಂಗಳೂರಿನಲ್ಲಿಯೇ ಸೀಮಂತ ಕಾರ್ಯಕ್ರಮ ನಡೆದಿದ್ದು, ಧನರಾಜ್ ಕುಟುಂಬಸ್ಥರು, ಸ್ನೇಹಿತರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಕವಿತಾ ಮತ್ತು ಅವರ ತಾಯಿ, ತಂಗಿ  ಸೀಮಂತದಲ್ಲಿ ಭಾಗಿಯಾಗಿ ಶಾಲಿನಿಗೆ ಶುಭಹಾರೈಸಿದ್ದಾರೆ.ಧನರಾಜ್ ಮತ್ತು ಶಾಲಿನಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಧನರಾಜ್ ತುಂಬಾ ಚೆನ್ನಾಗಿ ಮಿಮಿಕ್ರಿ ಮಾಡುತ್ತಾರೆ. ಸಾಮಾನ್ಯ ವ್ಯಕ್ತಿಯಾಗಿ ಧನರಾಜ್ ‘ಬಿಗ್‍ಬಾಸ್ ಕನ್ನಡ ಸೀಸನ್ 6’ ರಲ್ಲಿ ಬಿಗ್ ಮನೆಯೊಳಗೆ ಎಂಟ್ರಿ ನೀಡಿದ್ದು, ಖ್ಯಾತಿ ಪಡೆದುಕೊಂಡಿದ್ದರು. ಈ ವೇಳೆ ಕವಿತಾ ಗೌಡ ಮತ್ತು ಶಶಿ, ಧನರಾಜ್ ಉತ್ತಮ ಸ್ನೇಹಿತರಾಗಿದ್ದರು.ಧನರಾಜ್ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಶಿವರಾಜ್ ಕುಮಾರ್ ನಟನೆಯ ‘ರುಸ್ತುಂ’ ಸಿನಿಮಾದಲ್ಲಿ ಧನರಾಜ್ ಅಭಿನಯಿಸಿದ್ದಾರೆ.Sign in to your account
Username or Email Address


Password

 Remember Me


