ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಸಾವಿರಕ್ಕೆ ಹತ್ತಿರವಾಗಿದೆ. ಉಡುಪಿಯಲ್ಲಿ ಇಂದು 22 ಜನರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯ ಕೊರೊನಾ ಪೀಡಿತರ ಸಂಖ್ಯೆ 991ಕ್ಕೆ ಏರಿಕೆಯಾಗಿದೆ.ಇಂದಿನ ಸೋಂಕಿತರ ಪೈಕಿ ಮಹಾರಾಷ್ಟ್ರದಿಂದ ಬಂದ 21 ಜನರಲ್ಲಿ ಸೋಂಕು ಧೃಡವಾಗಿದೆ. ರೋಗಿ-5451 ನಿಂದ ಸಂಪರ್ಕದಿಂದ ಓರ್ವಬಿಗೆ ಸೋಂಕು ತಗುಲಿದೆ. ವಾರದ ಹಿಂದೆ ಉಡುಪಿಯ ಲ್ಯಾಬ್ ಟೆಕ್ನೀಷಿಯನ್ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರ ಸಂಪರ್ಕಕ್ಕೆ ಬಂದ ವೃದ್ಧರೊಬ್ಬರಿಗೆ ಸೋಂಕು ತಗುಲಿದೆ. ಸೋಂಕಿತರ ಪೈಕಿ 13 ಪುರುಷ, 6 ಮಹಿಳೆ ಮೂರು ಮಕ್ಕಳು ಇದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದ್ದಾರೆ.ಜಿಲ್ಲೆಯ ಕೊರೋನಾ ಪೀಡಿತರ ಪೈಕಿ 702 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಮಾಹಿತಿ ನೀಡಿದರು. ಇವತ್ತು 56 ಜನ ಗುಣಮುಖರಾಗಿದ್ದಾರೆ. ಎರಡು ದಿನದಲ್ಲಿ ಅವರ ಡಿಸ್ಚಾರ್ಜ್ ಆಗಲಿದೆ. ಸೋಂಕಿತರನ್ನು ಈಗಾಗಲೇ ತಾಲೂಕು ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗುವುದು ಎಂದು ಡಿಸಿ ಮಾಹಿತಿ ನೀಡಿದರು.


 Advertisement 







 Advertisement 




Sign in to your account
Username or Email Address


Password

 Remember Me


