ಬೆಂಗಳೂರು: ಚಾಮರಾಜಪೇಟೆಯ ನಾಲ್ಕನೇ ಕ್ರಾಸ್‍ನಲ್ಲಿ ಟೀ ಅಂಗಡಿಯನ್ನು ಇಟ್ಟಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ.ಉಡುಪಿಗೆ ಹೋಗಿದ್ದ ವ್ಯಕ್ತಿಗೆ ಕೋವಿಡ್ 19 ಬಂದಿದೆ. ಕೊರೊನಾ ಬಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅಕ್ಕಪಕ್ಕದ ಮನೆಯವರನ್ನು ಕ್ವಾರಂಟೈನ್ ಮಾಡಲು ಸಾಲು ಸಾಲು ಅಂಬುಲೆನ್ಸ್ ಗಳು ನಾಲ್ಕನೇ ಕ್ರಾಸ್‍ಗೆ ಬಂದಿದೆ.ಒಟ್ಟು 25 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಅಂಗಡಿಯಿಂದ ಟೀ ಸೇವಿಸಿದ ವ್ಯಕ್ತಿಗಳನ್ನ ಸಂಪರ್ಕಿಸುವುದೇ ಈಗ ದೊಡ್ಡ ಸವಾಲಿನ ಕೆಲಸವಾಗಿದೆ.ಕೊಮ್ಮಘಟ್ಟದಲ್ಲಿ 56 ವರ್ಷದ ಮಹಿಳೆಗೆ ಸೊಂಕು ಬಂದಿದೆ. ಕೊಮ್ಮಘಟ್ಟದ ಬಿಡಿಎ ಅಪಾಟ್ರ್ಮೆಂಟ್ ನಲ್ಲಿ ವಾಸವಿದ್ದ ಮಹಿಳೆ ಕೆಲ ದಿನಗಳಿಂದ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಕೊವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಈಗ ಈಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ನಾಲ್ವರನ್ನು ಕ್ವಾರಂಟೈನ್ ಮಾಡಲಾಗಿದೆ.Sign in to your account
Username or Email Address


Password

 Remember Me


