ಬೆಂಗಳೂರು: ಪ್ರಿಯಕರನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.ಮೋನಿಕಾ (22) ಮೃತ ಯುವತಿ. ಜೂನ್ 7 ರಂದು ಮೃತ ಮೋನಿಕಾ ಮೇಲೆ ಪ್ರಿಯಕರ ಹಲ್ಲೆ ಮಾಡಿದ್ದನು. ಅಂದಿನಿಂದ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಇಂದು ಫಲಕಾರಿಯಾಗದೆ ಮೋನಿಕಾ ಸಾವನ್ನಪ್ಪಿದ್ದಾಳೆ.ಏನಿದು ಪ್ರಕರಣ?
ಮೃತ ಮೋನಿಕಾ ಕಳೆದ 4 ವರ್ಷಗಳಿಂದ ಆರೋಪಿ ಬಬೀತ್‍ನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಬಬೀತ್ ಜೊತೆ ಲವ್ ಬ್ರೇಕ್ ಅಪ್ ಆಗಿತ್ತು. ನಂತರ ಮೋನಿಕಾ ಕಳೆದ 5 ತಿಂಗಳಿನಿಂದ ರಾಹುಲ್‍ನನ್ನು ಪ್ರೀತಿಸುತ್ತಿದ್ದಳು. ಜೂನ್ 7 ರಂದು ರಾಹುಲ್ ಹುಟ್ಟುಹಬ್ಬವಿತ್ತು. ಅಂದು ಮೋನಿಕಾ ಬರ್ತ್ ಡೇ ಪಾರ್ಟಿಗೆಂದು ರಾಹುಲ್ ಮನೆಗೆ ಹೋಗಿದ್ದಳು. ಈ ಬಗ್ಗೆ ತಿಳಿದು ಆರೋಪಿ ಬಬೀತ್ ನೇರವಾಗಿ ರಾಹುಲ್ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ.ರಾಹುಲ್ ಮನೆಯಿಂದ ಮೋನಿಕಾಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಮನೆಯ ಗೋಡೆಗೆ ತಲೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ನಂತರ ಆಕೆಯ ಪೋಷಕರಿಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಅಪಘಾತವಾಗಿದೆ ಎಂದು ನಂಬಿಸಿದ್ದನು. ಪ್ರಜ್ಞೆ ತಪ್ಪಿದ್ದ ಮೋನಿಕಾಳನ್ನು ಜೂನ್ 7 ರಂದು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾಳೆ.ಅನುಮಾನಗೊಂಡ ಪೋಷಕರು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಮಾಡಿದ ನಂತರ ಆರೋಪಿಗಳ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣವನ್ನ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಬಬೀತ್ ಮತ್ತು ರಾಹುಲ್ ವಿರುದ್ಧ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣವನ್ನ ಕೊಲೆ ಪ್ರಕರಣವನ್ನಾಗಿ ಬದಲಾಯಿಸಿ ತನಿಖೆ ಮುಂದುವರಿಸಲಾಗಿದೆ.Sign in to your account
Username or Email Address


Password

 Remember Me


