ಹಾಸನ: ಕೊರೊನಾಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದ್ದು, 60 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.ರೋಗಿ ನಂ.225 ಅರವತ್ತು ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಇವರು ಮೂಲತಃ ಬೇಲೂರು ತಾಲೂಕಿನವರಾಗಿದ್ದು, ಹಾಸನ ತಾಲೂಕಿನ ಹಳ್ಳಿಯೊಂದರಲ್ಲಿ ನೆಲೆಸಿದ್ದರು. ವೃದ್ಧಗೆ ಈ ಹಿಂದೆಯೇ ಪಾಶ್ರ್ವವಾಯು ಸಂಭವಿಸಿತ್ತು. ಅಲ್ಲದೆ ಡಯಾಬಿಟಿಸ್, ಉಸಿರಾಟದ ತೊಂದರೆ ಸೇರಿದಂತೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಜೂನ್ 10ರಿಂದ ಉಸಿರಾಟದ ತೊಂದರೆಗಾಗಿ ಕೆಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು.ಬಳಿಕ ಖಾಸಗಿ ಆಸ್ಪತ್ರೆಯಿಂದ ಕೋವಿಡ್-19 ಆಸ್ಪತ್ರೆಗೆ ಮೃತ ವೃದ್ಧನನ್ನು ಶಿಫ್ಟ್ ಮಾಡಿ, ಜೂನ್ 11ಕ್ಕೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಅವರ ವರದಿ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ವರದಿ ಬಂದ ನಂತರ ಇಂದು ಮಧ್ಯಾಹ್ನ 1:15ಕ್ಕೆ ಕೊರೊನಾ ಸೋಂಕಿತ ವೃದ್ಧ ಮೃತಪಟ್ಟಿದ್ದಾರೆ. ಮೃತ ವೃದ್ಧನ ಮಗ ಕ್ಯಾಂಟರ್ ವಾಹನ ಓಡಿಸುತ್ತಿದ್ದು, ತರಕಾರಿ ತೆಗೆದುಕೊಂಡು ಹೊರರಾಜ್ಯಕ್ಕೆ ಹೋಗಿ ಬರುತ್ತಿದ್ದ ಎನ್ನಲಾಗಿದೆ. ಈ ಮೂಲಕ ಮೃತ ವೃದ್ಧನಿಗೆ ಕೊರೊನಾ ಬಂದಿರಬಹುದು ಎನ್ನಲಾಗಿದೆ.ಮುನ್ನೆಚ್ಚರಿಕಾ ಕ್ರಮವಾಗಿ ಮೃತ ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿ ಪಡೆದು ಕ್ವಾರಂಟೈನ್ ಮಾಡಲಾಗಿದೆ. ವೃದ್ಧನ ಸಾವಿನಿಂದ ಹಾಸನ ಜಿಲ್ಲೆಯಲ್ಲಿ ಕೊರೊನಾ ಸಾವಿನ ಖಾತೆ ತೆರೆದಂತಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.Sign in to your account
Username or Email Address


Password

 Remember Me


