– ದಂಪತಿ ಕೋಳಿ ಜಗಳದಲ್ಲಿ ಮಗು ಅನಾಥ
– ಬಿರಿಯಾನಿ ತಿಂದು ಹೆಂಡ್ತಿ ಕೊಂದು ಪತಿ ಹೈಡ್ರಾಮಾಬೆಂಗಳೂರು: ದಂಪತಿಯ ಕೋಳಿ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಹೊಂಗಸಂದ್ರದ ಶ್ರೀನಿವಾಸ ಲೇಔಟಿನಲ್ಲಿ ನಡೆದಿದೆ.ಕೊಲೆಯಾದ ಪತ್ನಿಯನ್ನು ವೆಂಕಟಲಕ್ಷ್ಮೀ (26) ಎಂದು ಗುರುತಿಸಲಾಗಿದೆ. ಟೈಲರ್ ಕೆಲಸ ಮಾಡುತ್ತಿದ್ದ ಸುರೇಶ್ (30) ತನ್ನ ಪತ್ನಿಯನ್ನು ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈಗ ಸುರೇಶ್‍ನನ್ನು ಪೊಲೀಸರು ಬಂಧಿಸಿದ್ದು, ಇತ್ತ ತಾಯಿ ಸಾವು, ತಂದೆ ಜೈಲಿಗೆ ಹೋದ ಪರಿಣಾಮ ಅವರ ಮಗು ಅನಾಥವಾಗಿದೆ.ಕಳೆದ ಭಾನುವಾರ ರಜೆ ದಿನವಾದ ಕಾರಣ ಗಂಡ ಹೆಂಡತಿ ಸೇರಿಕೊಂಡು ಚಿಕನ್ ತಂದು ಬಿರಿಯಾನಿ ಮಾಡಿದ್ದಾರೆ. ಊಟ ಮುಗಿದ ಬಳಿಕ ಎಂದಿನಂತೆ ಪತಿ ಸುರೇಶ್ ಮೇಲೆ ಅನುಮಾನ ಪಟ್ಟು ಪತ್ನಿ ವೆಂಕಟಲಕ್ಷ್ಮೀ ಜಗಳ ಮಾಡಿದ್ದಾಳೆ. ಈ ವೇಳೆ ಸುರೇಶ್ ಸಾಯುಸುತ್ತೇನೆ ಎಂದು ಅವಾಜ್ ಹಾಕಿದ್ದಾನೆ. ಆಗ ಪತ್ನಿ ‘ಸಾಯಿಸ್ತಿಯಾ.. ಸಾಯ್ಸು ನೋಡೋಣ’ ಎಂದಿದ್ದಾಳೆ. ಆಗ ಸುರೇಶ್ ಮನೆಯಲ್ಲಿದ್ದ ಚಾಕುವಿನಿಂದ ವೆಂಕಟಲಕ್ಷ್ಮೀಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ನಂತರ ಘಟನೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸುರೇಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಗ ಸುರೇಶ್ ನಾನು ಕೊಲೆ ಮಾಡಲಿಲ್ಲ ಅವಳೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಳು ಎಂದು ಹೈಡ್ರಾಮಾ ಮಾಡಿದ್ದಾನೆ. ಆದರೆ ಕೊನೆಗೆ ತಾನೇ ಪತ್ನಿ ವೆಂಕಟಲಕ್ಷ್ಮೀಯನ್ನು ಕೊಂದಿದ್ದಾಗಿ ಸುರೇಶ್ ತಪ್ಪೊಪ್ಪಿಕೊಂಡಿದ್ದಾನೆ.ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


