ಚಿಕ್ಕಬಳ್ಳಾಪುರ: ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಂದು ವರ್ಷದ ಹೆಣ್ಣು ಮಗು ಕೊರೊನಾದಿಂದ ಗುಣಮುಖವಾಗಿದೆ.ಮಹಾರಾಷ್ಟ್ರದಿಂದ ಒಂದು ವರ್ಷದ ಮಗು ಸಮೇತ ದಂಪತಿ ಚಿಕ್ಕಬಳ್ಳಾಪುರ ಜಿಲ್ಲೆಗ ಆಗಮಿಸಿದ್ದರು. ಮೇ 25ರಂದು ಒಂದು ವರ್ಷದ ಹೆಣ್ಣು ಮಗುವಿಗೆ ಕೊರೊನಾ ದೃಢವಾಗಿತ್ತು. ಅಂದೇ ಮಗುವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಇದಲ್ಲದೇ ಈ ಮಗುವಿನ ತಂದೆ ತಾಯಿ ಸಹ ಕೊರೊನಾಗೆ ತುತ್ತಾಗಿದ್ದರು. ಅವರು ಸಹ ಕೊರೊನಾದಿಂದ ಗುಣಮುಖರಾಗಿದ್ದಾರೆ.ಒಂದಡೆ ಕೊರೊನಾ ಪಾಸಿಟಿವ್ ಮತ್ತು ಅದರ ಜೊತೆಗೆ (ಎಸ್‍ಎಎಮ್) ತೀವ್ರ ತರವಾದ ಅಪೌಷ್ಟಿಕತೆಯಿಂದ ಸಹ ಮಗು ಬಳಲುತ್ತಿತ್ತು. ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ಮಗು ದಾಖಲಾಗುವ 7.4 ಕೆಜಿ ಇದ್ದ ಮಗು ಡಿಸ್ಚಾರ್ಜ್ ವೇಳೆ 8.7 ಕೆಜಿ ತೂಕವಿದ್ದು, ತೂಕದಲ್ಲಿ ಸಹ ಏರಿಕೆ ಆಗಿದೆ. ಅಪೌಷ್ಟಿಕತೆ ನಡುವೆಯೂ ಕೊರೊನಾ ಗೆದ್ದು ಮಗು ಗುಣಮುಖವಾಗಿದೆ. ತಂದೆ ತಾಯಿ ಜೊತೆ ಮಗು ಸಹ ಗುಣಮುಖವಾಗಿ ಸದ್ಯ ಕ್ಷೇಮವಾಗಿ ಮನೆ ಸೇರುವಂತಾಗಿದೆ.Sign in to your account
Username or Email Address


Password

 Remember Me


