ಮಂಡ್ಯ: ಕೆಆರ್‌ಎಸ್ ಡ್ಯಾಂ ಪಕ್ಕದಲ್ಲೇ ಬೆಂಗಳೂರಿನ ಕೆಲ ಶ್ರೀಮಂತ ವ್ಯಕ್ತಿಗಲು ರೇವ್ ಪಾರ್ಟಿ ನಡೆಸಿದ್ದಾರೆ.ಮೈಸೂರು ಮೂಲದ ಸಂಜಯ್ ಎಂಬವರಿಗೆ ಸೇರಿದ ತೋಟ ಇದಾಗಿದ್ದು, ಕೊರೊನಾ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇದನ್ನು ತಡರಾತ್ರಿಯಲ್ಲಿ ಕೇಳಲು ಹೋದ ಸಾರ್ವಜನಿಕರಿಗೆ ಆವಾಜ್ ಹಾಕಿದ್ದಾರೆ.ಬೆಂಗಳೂರಿನ ಶ್ರೀಮಂತ ವ್ಯಕ್ತಿಗಳು ರಾತ್ರಿ ಕಾರಿನಲ್ಲಿ ಆಗಮಿಸಿದ್ದರು. ಅವರಿಗಾಗಿ ಆರ್ಕೆಸ್ಟ್ರಾ, ಧ್ವನಿವರ್ಧಕ ಬಳಸಿ ಮತ್ತು ಪೆಂಡಾಲ್ ಹಾಕಿ ಎಣ್ಣೆ ಪಾರ್ಟಿ ಆಯೋಜಿಸಲಾಗಿತ್ತು. ಠಾಣೆ ಸಮೀಪದಲ್ಲೇ ಪಾರ್ಟಿ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು ಎಂಬ ಆರೋಪ ಕೇಳಿ ಬಂದಿದೆ.Sign in to your account
Username or Email Address


Password

 Remember Me


